ಬೆಂಗಳೂರು: ಕರ್ನಾಟಕದ ಸಿದ್ಧಾಂತ್ ಧಾರಿವಾಲ್ ಅವರು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ ಟೂರ್ನಿಯ (ಡಬ್ಲ್ಯುಟಿಟಿ) 15 ವರ್ಷದೊಳಗಿನವರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ಸಿದ್ಧಾಂತ್ ಅವರು ಡಬ್ಲ್ಯುಟಿಟಿ ಟೂರ್ನಿಯಲ್ಲಿ ಜಯಿಸಿದ ಚೊಚ್ಚಲ ಪದಕ ಇದಾಗಿದೆ.
ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿದ್ಧಾಂತ್ ಅವರು 12–14, 5–11, 9–11ರಿಂದ ಕತಾರ್‌ನ ಅಬ್ದುಲ್ ಅಜೀಜ್ ಅಲ್ ಅಬ್ದುಲ್ಲಾ ಎದುರು ನೇರ ಸೆಟ್‌ಗಳಲ್ಲಿ ಪರಾಭವಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.