ಪ್ರಾತಿನಿಧಿಕ ಚಿತ್ರ
ನವದೆಹಲಿ: ವಿಶೇಷ ಚೇತನರ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡೆಗಳಲ್ಲಿ 33 ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ಮೂಡಿಸಿದ ಭಾರತ ತಂಡದ ಸ್ಪರ್ಧಿಗಳನ್ನು ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ಕ್ರೀಡಾ ಸಚಿವಾಲಯವು ಸನ್ಮಾನಿಸಿತು.
ಇಟಲಿಯ ಟ್ಯೂರಿನ್‌ನಲ್ಲಿ ಮಾರ್ಚ್‌ನಲ್ಲಿ ನಡೆದ ಈ ಕೂಟದಲ್ಲಿ ಭಾರತದ ಸ್ಪರ್ಧಿಗಳು ಎಂಟು ಚಿನ್ನ, 18 ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.
‘ಈ ವಿಶೇಷ ಒಲಿಂಪಿಕ್ಸ್ ಬರೇ ಕ್ರೀಡಾಕೂಟ ಮಾತ್ರವಲ್ಲ, ಇದು ಒಳ್ಳಗೊಳ್ಳುವಿಕೆ ಮತ್ತು ಸಬಲೀಕರಣದ ನಿಟ್ಟಿನಲ್ಲಿ ನಡೆದ ಆಂದೋಲನ’ ಎಂದು ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಅವರು ಅಥ್ಲೀಟುಗಳನ್ನು ಉದ್ದೇಶಿಸಿ ಮಾತನಾಡಿದರು.
ವಿಶೇಷ ಒಲಿಂಪಿಕ್ಸ್ ಭಾರತ್‌ನ ಅಧ್ಯಕ್ಷ ಮಲ್ಲಿಕಾ ನಡ್ಡಾ ಅವರು ಅಥ್ಲೀಟುಗಳಿಗೆ ನೀಡಲಾಗುವ ನಗದು ಬಹುಮಾನ ಹೆಚ್ಚಿಸಲು ಪ್ರಯತ್ನ ನಡೆಸಿದ ರಕ್ಷಾ ಅವರಿಗೆ ಧನ್ಯವಾದ ಹೇಳಿದರು.
ಪರಿಷ್ಕೃತ ನಿಯಮದಂತೆ, ಚಿನ್ನ ಗೆಲ್ಲುವ ಅಥ್ಲೀಟುಗಳಿಗೆ ₹20ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ₹14 ಲಕ್ಷ ಮತ್ತು ಕಂಚಿನ ಪದಕ ವಿಜೇತರಿಗೆ ₹8 ಲಕ್ಷ ನೀಡಲಾಗುತ್ತಿದೆ. ಈ ಹಿಂದೆ ಪ್ಯಾರಾ ಅಥ್ಲೀಟುಗಳಿಗೆ ನೀಡಲಾಗುತ್ತಿದ್ದ ನಗದು ಬಹುಮಾನ ಇದೀಗ ಬಹಳಷ್ಟು ಏರಿಕೆ ಕಂಡಿದೆ.
ವಿಶೇಷ ಚೇತನರ ಒಲಿಂಪಿಕ್ಸ್ ಅಥ್ಲೀಟುಗಳನ್ನು ಉತ್ತೇಜಿಸಲು ಕ್ರೀಡಾ ಸಚಿವಾಲಯ 11 ಕ್ರೀಡೆಗಳಲ್ಲಿ ರಾಷ್ಟ್ರೀಯ ಶಿಬಿರ ನಡೆಸುತ್ತಿದೆ. ಪರಿಕರಗಳ ಖರೀದಿಗೆ ನೆರವು ನೀಡುತ್ತಿದೆ. ಪ್ರಯಾಣ ವೆಚ್ಚ, ವಾಸ್ತವ್ಯ ಮತ್ತು ಊಟದ ವೆಚ್ಚ ಭರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.