ADVERTISEMENT

ಒಲಿಂಪಿಕ್ಸ್‌ ಚಿನ್ನ ಗೆದ್ದ ಅಥ್ಲೀಟುಗಳಿಗೆ ನಗದು: ಕ್ರೀಡಾ ಒಕ್ಕೂಟಗಳ ಖಂಡನೆ

ಏಜೆನ್ಸೀಸ್
Published 19 ಏಪ್ರಿಲ್ 2024, 14:24 IST
Last Updated 19 ಏಪ್ರಿಲ್ 2024, 14:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಲುಸಾನ್‌: ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಲಿಗೆ ನಗದು ಬಹುಮಾನ ನೀಡುವ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆಯ ನಿರ್ಧಾರ ‘ಒಲಿಂಪಿಕ್ಸ್‌ ಆಶಯಗಳ ಮೌಲ್ಯ ತಗ್ಗಿಸಿದಂತೆ’ ಎಂದು ಒಲಿಂಪಿಕ್‌ ಕ್ರೀಡೆಗಳ ಒಕ್ಕೂಟಗಳು ಶುಕ್ರವಾರ ಖಂಡಿಸಿವೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಅಥ್ಲೀಟುಗಳಿಗೆ 47,000 ಯೂರೊ ಬಹುಮಾನ (ಸುಮಾರು ₹41.80 ಲಕ್ಷ) ನೀಡುವುದಾಗಿ ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್‌ ಕೊ ಅವರು ಕಳೆದ ವಾರ ಪ್ರಕಟಿಸಿದ್ದರು. ಇದರ ಬಗ್ಗೆ ಅಸಂತುಷ್ಟಗೊಂಡಿರುವುದಾಗಿ ಬೇಸಿಗೆ ಒಲಿಂಪಿಕ್ಸ್‌ ಅಂತರರಾಷ್ಟ್ರೀಯ ಒಕ್ಕೂಟಗಳ ಸಂಘವು (ಎಎಸ್‌ಒಐಎಫ್‌) ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅಥ್ಲೀಟುಗಳಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ ಮೊದಲ ಕ್ರೀಡಾ ಸಂಸ್ಥೆ ವರ್ಲ್ಡ್ ಅಥ್ಲೆಟಿಕ್ಸ್‌ ಎನಿಸಿದೆ. ನಾಲ್ಕು ವರ್ಷಗಳ ನಂತರ ಲಾಸ್‌ ಏಂಜಲಿಸ್‌ನಲ್ಲಿ ಮೂರೂ ಪದಕಗಳನ್ನು ಗೆದ್ದ ಅಥ್ಲೀಟುಗಳಿಗೂ ಬಹುಮಾನ ನೀಡುವುದಾಗಿಯೂ ಅದು ತಿಳಿಸಿದೆ.

ಎಎಸ್‌ಒಐಎಫ್‌ನಲ್ಲಿ 30 ಪೂರ್ಣಪ್ರಮಾಣದ ಸದಸ್ಯ ಸಂಸ್ಥೆಗಳಿದ್ದು, ಎರಡು ಸಹ ಸದಸ್ಯ ಸಂಸ್ಥೆಗಳಿವೆ. ವರ್ಲ್ಡ್‌ ಅಥ್ಲೆಟಿಕ್ಸ್‌, ಒಲಿಂಪಿಕ್ಸ್‌ ಮೌಲ್ಯಗಳನ್ನು ದುರ್ಬಲಗೊಳಿಸಿದೆ. ಒಲಿಂಪಿಕ್‌ ಚಿನ್ನದ ಪದಕಕ್ಕೆ ಈ ರೀತಿ ಬೆಲೆ ನಿರ್ಣಯಿಸುವುದು ಸರಿಯಲ್ಲ ಎಂದು ಹೇಳಿಕೆಯಲ್ಲಿ ಅದು ತಿಳಿಸಿದೆ. ಇತರ ಒಲಿಂಪಿಕ್‌ ಕ್ರೀಡಾ ಸಂಸ್ಥೆಗಳು ಈ ರೀತಿ ಹಣವನ್ನು ನೀಡಲು ಸಶಕ್ತವಾಗಿಲ್ಲ ಎಂದೂ ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.