ನವದೆಹಲಿ: ಉದ್ದೀಪನ ಮದ್ದು ಬಳಕೆಯ ದುಷ್ಪರಿಣಾಮಗಳು ಕುರಿತು ಜಾಗೃತಿಯ ಪಾಠವನ್ನು ಶಾಲಾ ಶಿಕ್ಷಣದ ಪಠ್ಯದಲ್ಲಿ ಅಳವಡಿಸಬೇಕು ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸೂಖ್ ಮಾಂಡವಿಯಾ ಹೇಳಿದರು.
ಬುಧವಾರ ನಡೆದ ಎನ್‌ಡಿಟಿಎಲ್ ವಾರ್ಷಿಕ ಸಮ್ಮೇಳನದಲ್ಲಿ ‘ಉದ್ದೀಪನ ಮದ್ದು ತಡೆ ವಿಜ್ಞಾನ; ನಾವೀನ್ಯತೆ ಹಾಗೂ ಸವಾಲುಗಳು’ ಕುರಿತು ಅವರು ಮಾತನಾಡಿದರು.
‘ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳಲ್ಲಿ ಉದ್ದೀಪನ ಮದ್ದು ಬಳಕೆಯಿಂದಾಗುವ ಅನಾಹುತಗಳ ಕುರಿತು ಜಾಗೃತಿ ಅವಶ್ಯಕವಾಗಿದೆ. ಅಲ್ಲದೇ ಕ್ರೀಡಾ ಕ್ಷೇತ್ರವನ್ನು ಕಾಡುತ್ತಿರುವ ಈ ಪಿಡುಗು ನಿಯಂತ್ರಿಸಲು ಶಿಕ್ಷಣ ಮುಖ್ಯವಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.