ADVERTISEMENT

ಸೆಪಕ್‌ ಟಕ್ರಾ: ದೆಹಲಿ, ಕೇರಳ ತಂಡಗಳಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 16:05 IST
Last Updated 7 ಅಕ್ಟೋಬರ್ 2022, 16:05 IST
ಚಂದರಗಿಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸೆಪಕ್‌ ಟಕ್ರಾ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ದೆಹಲಿ ಬಾಲಕರ ತಂಡ ಶೀಲ್ಡ್‌ ಎತ್ತಿ ಹಿಡಿಯಿತು
ಚಂದರಗಿಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸೆಪಕ್‌ ಟಕ್ರಾ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ದೆಹಲಿ ಬಾಲಕರ ತಂಡ ಶೀಲ್ಡ್‌ ಎತ್ತಿ ಹಿಡಿಯಿತು   

ಬೆಳಗಾವಿ:ದೆಹಲಿ ಹಾಗೂ ಕೇರಳ ತಂಡಗಳು ಚಂದರಗಿಯ ಎಸ್‌.ಎಂ. ಕಲೂತಿ ಕ್ರೀಡಾ ವಸತಿ ಶಾಲೆಯಲ್ಲಿ ನಡೆದ ಸೆಪಕ್‌ ಟಕ್ರಾ ಸಬ್‌ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ, ಕ್ರಮವಾಗಿ ಬಾಲಕ ಹಾಗೂ ಬಾಲಕರ ರೆಗೋ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದವು.

ಶುಕ್ರವಾರ ನಡೆದ ಐದನೇ ದಿನದಾಟದಲ್ಲಿ ದೆಹಲಿ ಬಾಲಕರ ತಂಡವು ಮಣಿಪುರ ತಂಡವನ್ನು 17–21, 22–20, 21–13 ಅಂಕಗಳಿಂದ ಸೋಲಿಸಿತು. ಸೆಮಿಫೈನಲ್‌ ಪಂದ್ಯದಲ್ಲಿ ದೆಹಲಿ ತಂಡದ ಆಟಗಾರರು ನಾಗಾಲ್ಯಾಂಡ್‌ ವಿರುದ್ಧ ಹಾಗೂ ಮಣಿಪುರ ತಂಡದವರು ಬಿಹಾರ ವಿರುದ್ಧ ಜಯ ಸಾಧಿಸಿದ್ದರು.

ಬಾಲಕಿಯರ ವಿಭಾಗದಲ್ಲಿ ಕೇರಳ ತಂಡವು 21-11, 21-16 ಅಂಕಗಳಿಂದ ಗುಜರಾತನ್ನು ಮಣಿಸಿ ಬಂಗಾರ ಗೆದ್ದಿತು. ಸೆಮಿಪೈನಲ್‌ ಪಂದ್ಯದಲ್ಲಿ ಕೇರಳ ಬಾಲಕಿಯರು ಮಣಿಪುರ ವಿರುದ್ಧ ಹಾಗೂ ಗುಜರಾತ್‌ ತಂಡದವರು ಹರ್ಯಾಣದ ವಿರುದ್ಧ ಗೆದ್ದಿದ್ದರು.

ADVERTISEMENT

ಸಮಾರೋಪ: ಐದು ದಿನಗಳಿಂದ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ 29 ರಾಜ್ಯಗಳಿಂದ 600 ಕ್ರೀಡಾಪಟುಗಳು ಹಾಗೂ 50 ಜನ ತರಬೇತುದಾರು, ನಿರ್ಣಾಯಕರು ಪಾಲ್ಗೊಂಡರು.

ಶುಕ್ರವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪೋಕೋ ಸಂಸ್ಥೆಯ ನಿರ್ದೇಶಕರಾದ ಎಸ್.ಆರ್.ನವರಕ್ಕಿ, ಎಂ.ಎಸ್‌.ಮನೋಳಿ, ಎಸ್‌.ಬಿ. ಯರಗಣವಿ, ಮಾಜಿ ಅಂತರರಾಷ್ಟ್ರೀಯ ಸೆಪೆಕ್ ಟಕ್ರಾ ಆಟಗಾರ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.