ADVERTISEMENT

ನಿರ್ಮಲಾ ಶೆರಾನ್‌ ಅಮಾನತು

ಉದ್ದೀಪನಾ ಮದ್ದು ಸೇವನೆ ಸಾಬೀತು

ಪಿಟಿಐ
Published 9 ಅಕ್ಟೋಬರ್ 2019, 17:59 IST
Last Updated 9 ಅಕ್ಟೋಬರ್ 2019, 17:59 IST
ನಿರ್ಮಲಾ ಶೆರಾನ್‌
ನಿರ್ಮಲಾ ಶೆರಾನ್‌   

ಮೊನಾಕೊ: ಉದ್ದೀಪನಾ ಮದ್ದು ಸೇವಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಭಾರತದ ಓಟಗಾರ್ತಿ ನಿರ್ಮಲಾ ಶೆರಾನ್‌ ಅವರನ್ನು ಅಥ್ಲೆಟಿಕ್ಸ್ ಸಮಗ್ರತಾ ಘಟಕ (ಎಐಯು) ನಾಲ್ಕು ವರ್ಷ ಅಮಾನತು ಮಾಡಿದೆ. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಎರಡು ಚಿನ್ನದ ಪದಕಗಳನ್ನೂ ಅವರು ಕಳೆದುಕೊಂಡಿದ್ದಾರೆ.

2018ರ ಜೂನ್‌ನಲ್ಲಿ ಭಾರತದಲ್ಲೇ ನಡೆದ ಸ್ಪರ್ಧೆಯೊಂದರಲ್ಲಿ ನಿರ್ಮಲಾ ನಿಷೇಧಿತ ಮದ್ದು ಸೇವಿಸಿದ್ದರು. ಅಕ್ಟೋಬರ್‌ 7ರಂದು ಅವರನ್ನು ಅಮಾನತುಗೊಳಿಸಲು ಎಐಯು ನಿರ್ಧರಿಸಿತು.

‘ನಿರ್ಮಲಾ ಅವರು ಶಿಕ್ಷೆಯನ್ನು ಸ್ವೀಕರಿಸಿದ್ದು, ವಿಚಾರಣೆಗಾಗಿ ಮನವಿ ಮಾಡಿಕೊಂಡಿಲ್ಲ’ ಎಂದು ಎಐಯು ಹೇಳಿದೆ. ಅವರ ಅಮಾನತು ಅವಧಿಯು 2018ರ ಜೂನ್ 28ರಿಂದಲೇ ಆರಂಭವಾಗಲಿದೆ. 2016ರ ಆಗಸ್ಟ್‌ನಿಂದ 2018ರ ನವಂಬರ್‌ವರೆಗೆ ಅವರ ಸ್ಪರ್ಧೆಯ ಫಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ.

ADVERTISEMENT

ಭಾರತದಲ್ಲಿ ನಡೆದ 2017ರ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ನಿರ್ಮಲಾ 400 ಮೀಟರ್‌ ಓಟ ಹಾಗೂ 400X400 ಮೀ. ರಿಲೇಯಲ್ಲಿ ಚಿನ್ನದ ಪದಕ ಗೆದ್ದಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಇವೆರಡೂ ವಿಭಾಗಗಳಲ್ಲಿ ಅವರು ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.