ADVERTISEMENT

ಸ್ಕ್ವಾಷ್‌: ಚೊಟ್ರಾನಿ ಕ್ವಾರ್ಟರ್‌ ಫೈನಲ್‌ಗೆ

ಪಿಟಿಐ
Published 1 ಆಗಸ್ಟ್ 2019, 19:31 IST
Last Updated 1 ಆಗಸ್ಟ್ 2019, 19:31 IST

ಕ್ವಾಲಾಲಂಪುರ: ಭಾರತದ ವೀರ್ ಚೊಟ್ರಾನಿ, ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಭಾರತದ ಇತರ ಎಲ್ಲ ಆಟಗಾರರು ಗುರುವಾರ ಹೊರಬಿದ್ದರು.

ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದು ಇಲ್ಲಿಗೆ ಬಂದಿದ್ದ ಚೊಟ್ರಾನಿ ತಮಗಿಂತ ಹೆಚ್ಚಿನ ಶ್ರೇಯಾಂಕ ಹೊಂದಿರುವ ಸ್ವಿಟ್ಜರ್ಲೆಂಡ್‌ನ ಯಾನಿಕ್ ವಿಲ್ಹೆಮಿ ಅವರನ್ನು ನಾಲ್ಕು ಗೇಮ್‌ಗಳಲ್ಲಿ ಮಣಿಸಿದರು.

ಆರಂಭದಲ್ಲಿ ಚೊಟ್ರಾನಿ ಹಿನ್ನಡೆ ಅನುಭವಿಸಿದರು. ಮೊದಲ ಗೇಮ್‌ನಲ್ಲಿ ಅವರು ಎದುರಾಳಿಗೆ 10–12ರಲ್ಲಿ ಮಣಿದರು. ನಂತರ ಚೇತರಿಸಿಕೊಂಡು ಉಳಿದ ಮೂರು ಗೇಮ್‌ಗಳಲ್ಲಿ (11–6, 11–8, 11–3) ಗೆಲುವು ಸಾಧಿಸಿದರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ವೀರ್‌ ಚೊಟ್ರಾನಿ ಕೆನಡಾದ ಡಿ.ಖಾನ್‌ ಎದುರು 11-2, 11-3, 4-11,11-8ರಲ್ಲಿ ಗೆದ್ದರು. ಯಶ್‌ ಫಡ್ತೆ ಅವರನ್ನು ಯಾನಿಕ್ ವಿಲ್ಹೆಮಿ 15-13, 5-11, 11-7, 11-13, 6-11ರಲ್ಲಿ ಮಣಿಸಿದರು. ರಾಹುಲ್ ಬೈತಾ ಈಜಿಪ್ಟ್‌ನ ಎಲ್ ಟೊರ್ಕಿ ಎದುರು 9-11, 2-11, 4-11ರಲ್ಲಿ ಸೋತರು.

ಮಹಿಳೆಯರ ವಿಭಾಗದಲ್ಲಿ ಯೋಶ್ನಾ ಸಿಂಗ್ ಅವರನ್ನು ಹಾಂಕಾಂಗ್‌ನ ಸಿ.ಸಿನ್ ಯುಕ್ 11–3, 11–4, 11–4ರಲ್ಲಿ ಸೋಲಿಸಿದರು. ಸನ್ಯಾ ವಟ್ಸ್‌ 7–11, 7–11, 12–10, 6–11ರಲ್ಲಿ ಎ.ಅಜ್ಮಾನ್‌ಗೆ ಮಣಿದರು. ಐಶ್ವರ್ಯ ಖೂಬ್‌ಚಾಂದನಿ11-8, 8-11, 6-11,9-11ರಲ್ಲಿ ಸ್ಕಾಟ್ಲೆಂಡ್‌ನ ಜಿ.ಅಡೆರ್ಲಿ ಅವರಿಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.