ನವದೆಹಲಿ: ಭಾರತದ ಅಗ್ರಮಾನ್ಯ ಲಾಂಗ್‌ಜಂಪ್ ಸ್ಪರ್ಧಿ ಮುರಳಿ ಶ್ರೀಶಂಕರ್ ಅವರು ಕಜಕಸ್ತಾನದ ಅಲ್ಮಾಟಿಯಲ್ಲಿ ನಡೆದ ಕೊಸನೊವ್ ಸ್ಮರಣಾರ್ಥ ಅಥ್ಲೆಟಿಕ್ಸ್ ಕೂಟದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಕಂಚಿನ ಪದಕ ಮಟ್ಟದ ಕೂಟ ಇದಾಗಿದೆ. ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಶ್ರೀಶಂಕರ್ ಅವರು ಶನಿವಾರ ನಡೆದ ಪುರುಷರ ವಿಭಾಗದ ಲಾಂಗ್ ಜಂಪ್‌ನಲ್ಲಿ 7.94 ಮೀಟರ್ಸ್ ದೂರ ಜಿಗಿದು ಪ್ರಶಸ್ತಿ ಗಳಿಸಿದರು.
ಮೊದಲ ಯತ್ನದಲ್ಲೇ (7.94 ಮೀ.) ಪ್ರಶಸ್ತಿ ಖಚಿತಪಡಿಸಿಕೊಂಡ ಶ್ರೀಶಂಕರ್ ಅವರು ಎರಡನೇ ಜಂಪ್‌ನಲ್ಲಿ 7.73 ಮೀ. ಜಿಗಿದರು. ನಂತರದ ಜಂಪ್‌ಗಳಲ್ಲಿ ಕ್ರಮವಾಗಿ 7.58 ಮೀ., 7.57 ಮೀ., 7.80 ಮೀ. ಹಾಗೂ 7.79 ಮೀ. ಜಿಗಿದರು.
2024ರ ಏಪ್ರಿಲ್‌ನಲ್ಲಿ ಗಾಯಗೊಂಡಿದ್ದ ಶ್ರೀಶಂಕರ್, ಆ ನಂತರ ಸ್ಪರ್ಧೆಗಳಿಂದ ಹೊರಗುಳಿಯಬೇಕಾಗಿತ್ತು. ಕಳೆದ ಜುಲೈನಲ್ಲಿ ನಡೆದ ಇಂಡಿಯಾ ಓಪನ್ ಅಥ್ಲೆಟಿಕ್ಸ್ ಕೂಟದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಜಯಿಸಿದ್ದ ಅವರು ಪೋರ್ಚುಗಲ್‌ನಲ್ಲಿ ನಡೆದ ಮಯಾ ಸಿಡೇಡ್ ಡು ಡೆಸ್ಪೊರ್ಟೊ ಕೂಟದಲ್ಲಿಯೂ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.
Highlights - null
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.