ADVERTISEMENT

ಕೆನಡಾ ಓಪನ್‌: ಸೆಮಿಫೈನಲ್‌ಗೆ ಶ್ರೀಕಾಂತ್

ಪಿಟಿಐ
Published 5 ಜುಲೈ 2025, 16:23 IST
Last Updated 5 ಜುಲೈ 2025, 16:23 IST
ಸೆಮಿಫೈನಲ್‌ ಪ್ರವೇಶಿಸಿದ ಸಂಭ್ರಮದಲ್ಲಿ ಕಿದಂಬಿ ಶ್ರೀಕಾಂತ್ –‘ಎಕ್ಸ್’ ಚಿತ್ರ
ಸೆಮಿಫೈನಲ್‌ ಪ್ರವೇಶಿಸಿದ ಸಂಭ್ರಮದಲ್ಲಿ ಕಿದಂಬಿ ಶ್ರೀಕಾಂತ್ –‘ಎಕ್ಸ್’ ಚಿತ್ರ   

ಕ್ಯಾಲ್ಗರಿ (ಕೆನಡಾ): ಭಾರತದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್‌ ಅವರು ಇಲ್ಲಿ ನಡೆಯುತ್ತಿರುವ ಕೆನಡಾ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.

ಶ್ರೀಕಾಂತ್ ಅವರು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 21–18, 21–9ರಿಂದ ನೇರ ಗೇಮ್‌ಗಳಲ್ಲಿ ಚೀನಾ ತೈಪೆಯ ಚೌ ಟಿಯೆನ್ ಚೆನ್‌ ಅವರನ್ನು ಮಣಿಸಿದರು. ಶ್ರೀಕಾಂತ್ ಅವರು ಈ ಟೂರ್ನಿಯಲ್ಲಿ ಕಣದಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 49ನೇ ಸ್ಥಾನದಲ್ಲಿರುವ ಭಾರತದ ಈ ಆಟಗಾರ, ಸೆಮಿಫೈನಲ್‌ನಲ್ಲಿ ವಿಶ್ವದ ಆರನೇ ಶ್ರೇಯಾಂಕದ ಕೆಂಟಾ ನಿಶಿಮೊಟೊ ವಿರುದ್ಧ ಪೈಪೋಟಿ ನಡೆಸುವರು. ಜಪಾನ್‌ನ ಆಟಗಾರ ನಿಶಿಮೊಟೊ 21–15, 5–21, 21–17ರಿಂದ ಭಾರತದ ಎಸ್‌. ಶಂಕರ್‌ ಮುತ್ತುಸ್ವಾಮಿ ವಿರುದ್ಧ  ಗೆಲುವು ಸಾಧಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.