ADVERTISEMENT

ಬಿಡಬ್ಲ್ಯುಎಫ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿ:ಶ್ರೀಯಾಂಶಿಗೆ ಚೊಚ್ಚಲ ಪ್ರಶಸ್ತಿ

ಪಿಟಿಐ
Published 5 ಅಕ್ಟೋಬರ್ 2025, 14:25 IST
Last Updated 5 ಅಕ್ಟೋಬರ್ 2025, 14:25 IST
ಶ್ರೀಯಾಂಶಿ ವಾಲಿಶೆಟ್ಟಿ
ಶ್ರೀಯಾಂಶಿ ವಾಲಿಶೆಟ್ಟಿ   

ಅಲ್ ಐಯಿನ್, ಯುಎಇ: ಭಾರತದ ಯುವ ಪ್ರತಿಭಾನ್ವಿತ  ಆಟಗಾರ್ತಿ ಶ್ರೀಯಾಂಶಿ ವಾಲಿಶೆಟ್ಟಿ ಅವರು ಬಿಡಬ್ಲ್ಯುಎಫ್ ಸೂಪರ್ 100  ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. 

ಭಾನುವಾರ ನಡೆದ ಫೈನಲ್‌ನಲ್ಲಿ ತೆಲಂಗಾಣದ 18 ವರ್ಷದ ಶ್ರೀಯಾಂಶಿ 15-21, 22-20, 21-7ರಿಂದ ಭಾರತದವರೇ ಆದ ತಸ್ನೀಮ್ ಮೀರ್ ವಿರುದ್ಧ ಜಯಿಸಿದರು. 

ಪಂದ್ಯವು 49 ನಿಮಿಷ ನಡೆಯಿತು. ಮೊದಲ ಗೇಮ್‌ನಲ್ಲಿ ಶ್ರೀಯಾಂಶಿ ಸೋತರು. ಈ ಗೇಮ್‌ ಆರಂಭದಲ್ಲಿ ಶ್ರೀಯಾಂಶಿ 8–4ರ ಮುನ್ನಡೆ ಹೊಂದಿದ್ದರು. ಇದರ ನಂತರ ಚೇತರಿಸಿಕೊಂಡ ತಸ್ನೀಂ ಅವರು 14–9ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಅಲ್ಲಿಂದ ಮುಂದೆಯೂ ಬಿಗಿಹಿಡಿತ ಸಾಧಿಸಿದ ಗುಜರಾತ್ ಹುಡುಗಿ ತಸ್ನೀಂ ದೊಡ್ಡ ಅಂತರದ ಜಯ ಸಾಧಿಸಿದರು. 

ADVERTISEMENT

ಎರಡನೇ  ಗೇಮ್‌ನಲ್ಲಿಯೂ ಕಠಿಣ ಪೈಪೋಟಿ ಎದುರಿಸಿದ ಅವರು ಟೈಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿದರು. ನಂತರ ಕೊನೆಯ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಪಾರಮ್ಯ ಮೆರೆದ ಶ್ರೀಯಾಂಶಿ ತಮ್ಮ ಎದುರಾಳಿಯನ್ನು ಸೋಲಿಸಿದರು. ಶ್ರೀಯಾಂಶಿ ಅವರು ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.