ADVERTISEMENT

ಆನ್‌ಲೈನ್ ಚೆಸ್‌ ಟೂರ್ನಿ: ಜಂಟಿ ಅಗ್ರಸ್ಥಾನದಲ್ಲಿ ಹರಿಕೃಷ್ಣ

ಸೇಂಟ್‌ ಲೂಯಿಸ್‌ ರ‍್ಯಾಪಿಡ್‌ ಆನ್‌ಲೈನ್ ಚೆಸ್‌ ಟೂರ್ನಿ

ಪಿಟಿಐ
Published 16 ಸೆಪ್ಟೆಂಬರ್ 2020, 13:36 IST
Last Updated 16 ಸೆಪ್ಟೆಂಬರ್ 2020, 13:36 IST
ಪೆಂಟಾಲ ಹರಿಕೃಷ್ಣ (ಬಲ)–ಪಿಟಿಐ ಸಂಗ್ರಹ ಚಿತ್ರ
ಪೆಂಟಾಲ ಹರಿಕೃಷ್ಣ (ಬಲ)–ಪಿಟಿಐ ಸಂಗ್ರಹ ಚಿತ್ರ   

ಚೆನ್ನೈ : ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಸೇಂಟ್ ಲೂಯಿಸ್ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ಮೂರು ಸುತ್ತುಗಳ ಬಳಿಕ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಮೂರು ಸುತ್ತುಗಳ ಪೈಕಿ ಎರಡರಲ್ಲಿ ಗೆಲುವು ಹಾಗೂ ಒಂದರಲ್ಲಿ ಡ್ರಾ ಸಾಧಿಸಿರುವ ಅವರು ಆರ್ಮೆನಿಯಾದ ಲೆವೊನ್‌ ಅರೋನಿಯನ್‌ ಜೊತೆಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಅರೋನಿಯನ್‌ ಹಾಗೂ ಹರಿಕೃಷ್ಣ ಬಳಿ ಸದ್ಯ ತಲಾ ಐದು ಪಾಯಿಂಟ್‌‌ಗಳಿವೆ.

ಮಂಗಳವಾರ ತಡರಾತ್ರಿ ನಡೆದ ಟೂರ್ನಿಯ ಮೊದಲ ಸುತ್ತಿನಲ್ಲಿ ಹರಿಕೃಷ್ಣ ಅವರು ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ಲೇನಿಯರ್‌ ಡೊಮಿಂಗ್ವೇಜ್ ಅವರನ್ನು ಮಣಿಸಿದರು. ಎರಡನೇ ಪಂದ್ಯದಲ್ಲಿ ಇರಾನ್‌ನ ಅಲಿರೆಜಾ ಫಿರೌಜಾ ಎದುರು ಡ್ರಾ ಮಾಡಿಕೊಂಡರು.

ADVERTISEMENT

ಮೂರನೇ ಸುತ್ತಿನಲ್ಲಿ ಭಾರತದ ಎರಡನೇ ಕ್ರಮಾಂಕದ ಆಟಗಾರ, ರಷ್ಯಾದ ಅನುಭವಿ ಪಟು ಅಲೆಕ್ಸಾಂಡರ್‌ ಗ್ರಿಶ್ಚುಕ್‌ ಅವರ ಸವಾಲು ಮೀರಿದರು. 41 ನಡೆಗಳಲ್ಲಿ ಅಲೆಕ್ಸಾಂಡರ್‌ ಅವರಿಗೆ ಸೋಲುಣಿಸಿದರು.

ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಹರಿಕೃಷ್ಣ ರಷ್ಯಾದ ಇಯಾನ್‌ ನೆಪೊಮ್ನಿಯಾಟ್ಜಿ ವಿರುದ್ಧ ಆಡಲಿದ್ದಾರೆ. ಬಳಿಕ ಅರೋನಿಯನ್‌ ಹಾಗೂ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಎದುರಿಸಲಿದ್ದಾರೆ.

ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಮೂರು ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.