ಬ್ಯಾಸ್ಕೆಟ್‌ಬಾಲ್
ಬೆಂಗಳೂರು: ರೋಹನ್ ಸಂಗಲ್ ಮತ್ತು ರಿಷಿ ಅವರ ಆಟದ ಬಲದಿಂದ ದೇವಾಂಗ ಯೂನಿಯನ್ ತಂಡವು ಎಂ.ಸಿ.ಶ್ರೀನಿವಾಸ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಬಿ ಡಿವಿಷನ್ ಪುರುಷರ ಬ್ಯಾಸ್ಕೆಟ್‌ಬಾಲ್ ಲೀಗ್‌ನ ಪಂದ್ಯದಲ್ಲಿ 74–55ರಿಂದ ವೈಎಂಎಂಎ ತಂಡವನ್ನು ಮಣಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೆಲೀಗೇಶನ್ ಲೀಗ್ ಪಂದ್ಯದಲ್ಲಿ ವಿರಾಮದ ವೇಳೆಗೆ 46–32 ಅಂತರದ ಮುನ್ನಡೆ ಪಡೆದಿದ್ದ ಯೂನಿಯನ್ ತಂಡವು ಉತ್ತರಾರ್ಧದಲ್ಲೂ ಪ್ರಾಬಲ್ಯ ಮೆರೆಯಿತು. ರೋಹನ್ ಮತ್ತು ರಿಷಿ ಕ್ರಮವಾಗಿ 32 ಮತ್ತು 22 ಅಂಕ ಗಳಿಸಿದರು. ವೈಎಂಎಂಎ ತಂಡದ ಪ್ರಭಾತ್ ತೋಮರ್ 31, ಪ್ರಶಾಂತ್ ತೋಮರ್ 19 ಪಾಯಿಂಟ್ಸ್ ಸಂಪಾದಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವು 85–72ರಿಂದ ಬಾಷ್ ತಂಡವನ್ನು ಸೋಲಿಸಿತು. ಮಧ್ಯಂತರದ ವೇಳೆ 46–38 ಮುನ್ನಡೆ ಗಳಿಸಿದ್ದ ವ್ಯಾನ್ಗಾರ್ಡ್ಸ್ ತಂಡ ನಂತರವೂ ಮೇಲುಗೈ ಸಾಧಿಸಿತು. ಅನಿರುದ್ಧ್ (24) ಮತ್ತು ಅಕ್ಷನ್ ರಾವ್ (20) ವ್ಯಾನ್ಗಾರ್ಡ್ಸ್ ಪರ ಮಿಂಚಿದರು. ಬಾಷ್ ಪರ ಅರವಿಂದ್ 17 ಅಂಕ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.