ADVERTISEMENT

ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ: ಬೆಂಗಳೂರಿನ ಆಟಗಾರರ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 15:15 IST
Last Updated 27 ಜುಲೈ 2025, 15:15 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಮಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆಟಗಾರರು ಇಲ್ಲಿ ಭಾನುವಾರ ಆರಂಭಗೊಂಡ ಸೀನಿಯರ್ ಮತ್ತು 19 ವರ್ಷದೊಳಗಿನವರ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಧಿಪತ್ಯ ಸ್ಥಾಪಿಸಿ ಮುನ್ನಡೆದರು. ದಕ್ಷಿಣ ಕನ್ನಡ, ಮೈಸೂರು, ಬೆಳಗಾವಿ, ಉಡುಪಿ ಮತ್ತು ಕೊಡಗಿನ ಆಟಗಾರರೂ ಗೆಲುವು ದಾಖಲಿಸಿದರು.

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆ ಉರ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿರುವ ಟೂರ್ನಿಯ ಮೊದಲ ದಿನವಾದ ಭಾನುವಾರ ಸೀನಿಯರ್ ಮತ್ತು 19 ವರ್ಷದೊಳಗಿನ ಪುರುಷರ ಅರ್ಹತಾ ಪಂದ್ಯಗಳು ಮಾತ್ರ ನಡೆದವು. 

19 ವರ್ಷದೊಳಗಿನವರ ವಿಭಾಗದ ಎರಡನೇ ಸುತ್ತಿನ ಫಲಿತಾಂಶಗಳು: ಬೆಂಗಳೂರಿನ ಇಂದ್ರಜ್ ವಿನೋದ್‌ಗೆ ಬೆಂಗಳೂರಿನ ಧನಯ್ ರಾಣಾ ವಿರುದ್ಧ 15-12, 15-13ರಲ್ಲಿ ಜಯ. ಬೆಂಗಳೂರಿನ ಹರ್ಷಿಲ್ ಅಯ್ಯಪ್ಪಗೆ ದಕ್ಷಿಣ ಕನ್ನಡದ ಹರ್ಷವರ್ಧನ್ ವಿರುದ್ಧ 7-15, 15-13, 15-11ರಲ್ಲಿ ಗೆಲುವು. ಬೆಂಗಳೂರಿನ ತಿಲಕ್ ಬಿ.ಶೆಟ್ಟಿಗೆ ಬೆಂಗಳೂರಿನ ಜಶನ್ ಗೌಡ ವಿರುದ್ಧ 15-3, 15-4ರಲ್ಲಿ, ಬೆಂಗಳೂರಿನ ಆದಿತ್ಯ ಕುರುವಿಳಗೆ ಬೆಂಗಳೂರಿನ ಪ್ರಥಮ್ ಹಲಗೂರು ವಿರುದ್ಧ 15-4, 15-8ರಲ್ಲಿ, ಬೆಂಗಳೂರಿನ ಶ್ಯಾಮ್‌ಚರಣ್‌ಗೆ ಬೆಂಗಳೂರಿನ ಆಕರ್ಷ್‌ ವಿರುದ್ಧ 9-15, 15-12, 15-13ರಲ್ಲಿ, ಬೆಂಗಳೂರಿನ ಪ್ರೀತಂ ಕುಮಾರ್‌ಗೆ ಬೆಂಗಳೂರಿನ ವೈಭವ್ ವಿರುದ್ಧ 17-15, 15-13ರಲ್ಲಿ, ಬೆಂಗಳೂರಿನ ವರುಣ್‌ಗೆ ಬೆಂಗಳೂರಿನ ಆಯುಷ್‌ ಗೌಡ ವಿರುದ್ಧ 15-4, 15-4ರಲ್ಲಿ, ಬೆಂಗಳೂರಿನ ತೇಜಸ್‌ಗೆ ಬೆಂಗಳೂರಿನ ಪ್ರಣವ್ ವಿರುದ್ಧ 15-6, 15-9ರಲ್ಲಿ, ಉಡುಪಿಯ ಕನಿಷ್ಕ್‌ ಬೆಂಗ್ರೆಗೆ ಬೆಂಗಳೂರಿನ ಹರೀಶ್ ವಿರುದ್ಧ 15-4, 15-5ರಲ್ಲಿ, ದಕ್ಷಿಣ ಕನ್ನಡದ ಸಾತ್ವಿಕ್ ಪ್ರಭುಗೆ ಬೆಂಗಳೂರಿನ ರಿತ್ವಿಕ್ ರಾಜ್ ವಿರುದ್ಧ 15-8, 15-4ರಲ್ಲಿ, ಬೆಂಗಳೂರಿನ ತನ್ಮಯ್‌ಗೆ ಬೆಂಗಳೂರಿನ ಸನ್ಮಿತ್‌ ವಿರುದ್ಧ 15-3, 15-6ರಲ್ಲಿ, ಬೆಂಗಳೂರಿನ ವಿಸ್ಮಯ್‌ ರಾಜ್‌ಗೆ ಬೆಂಗಳೂರಿನ ಶ್ರೀಸಾಯ್‌ ವಿರುದ್ಧ 15-13, 15-3ರಲ್ಲಿ ಜಯ.

ADVERTISEMENT

ಬೆಂಗಳೂರು ಗ್ರಾಮಾಂತರದ ವನ್ಶಿಲ್‌ ಮೆಹತಾಗೆ ಬೆಂಗಳೂರಿನ ಮುರಳಿ ಕೃಷ್ಣ ವಿರುದ್ಧ 15-4, 15-12ರಲ್ಲಿ, ಬೆಂಗಳೂರಿನ ಸುಜಿತ್‌ಗೆ ಬೆಂಗಳೂರಿನ ಕರಣ್‌ ದಿನೇಶ್ ವಿರುದ್ಧ 15-13, 16-14ರಲ್ಲಿ, ಬೆಂಗಳೂರಿನ ಹಾರ್ದಿಕ್‌ಗೆ ಬೆಂಗಳೂರಿನ ವಿವಾನ್ ವಿರುದ್ಧ 15-1, 15-1ರಲ್ಲಿ, ಬೆಂಗಳೂರಿನ ಮಹಮ್ಮದ್ ಸುಹಾನ್‌ಗೆ ದಕ್ಷಿಣ ಕನ್ನಡದ ಅಶ್ವಿಜ್ ಕಾಮತ್ ವಿರುದ್ಧ 15-11, 15-12ರಲ್ಲಿ, ಬೆಂಗಳೂರಿನ ಕರನ್ಶ್‌ಗೆ ಬೆಂಗಳೂರಿನ ವಿಹಾನ್ ಅರೋರ ವಿರುದ್ಧ 15-7, 15-6ರಲ್ಲಿ, ಬೆಂಗಳೂರಿನ ರಾಘವ ಶರ್ಮಗೆ ಉಡುಪಿಯ ಅಶ್ವಿನ್‌ ಶೆಟ್ಟಿ ವಿರುದ್ಧ 15-9, 15-6ರಲ್ಲಿ, ಬೆಂಗಳೂರಿನ ಶ್ರೇಯಸ್ ಚಂದ್ರಶೇಖರ್‌ಗೆ ಬೆಂಗಳೂರಿನ ಹಿತೇನ್ ಕರ್ಕೇರ ವಿರುದ್ಧ 15-9, 15-7ರಲ್ಲಿ, ಬೆಂಗಳೂರಿನ ವೀರ್ ದಿಡ್ಡಿಗೆ ಬೆಂಗಳೂರಿನ ಸುಹಾಸ್ ರೆಡ್ಡಿ ವಿರುದ್ಧ 15-12, 15-10ರಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರದ ನೀಲೇಶ್‌ಗೆ ಬೆಂಗಳೂರಿನ ತಮನ್‌ ವಿರುದ್ಧ 15-10, 15-13ರಲ್ಲಿ ಗೆಲುವು.

8 ಮಂದಿಗೆ ವಾಕ್‌ ಓವರ್‌

ಬೆಂಗಳೂರಿನ ಶಿವರಾಜ್ ಕೊಂಟನೂರ್‌, ಅದಿತ್ ಶೆಟ್ಟಿ, ಸ್ವಯಂ, ಸ್ವರೂಪ್ ಪಾಲಾಕ್ಷಯ್ಯ, ಅಭಿನವ್‌, ವಿಭು ಪ್ರವೀಣ್‌, ದಕ್ಷಿಣ ಕನ್ನಡದ ನಿಕೇತನ್ ಅಮೀನ್ ಮತ್ತು ಬೆಳಗಾವಿಯ ಮಹಿಮ್‌ ಅವರು ವಾಕ್‌ ಓವರ್ ಪಡೆದು ಮೂರನೇ ಸುತ್ತು ಪ್ರವೇಶಿಸಿದರು. ಸೀನಿಯರ್ ವಿಭಾಗದ ಮೊದಲ ಸುತ್ತಿನಲ್ಲಿ 58 ಮಂದಿ ಮುಂದಿನ ಸುತ್ತು ಪ್ರವೇಶಿಸಿದರು. ಇವರ ಪೈಕಿ 43 ಆಟಗಾರರು ಬೆಂಗಳೂರಿನವರು. 7 ಮಂದಿ ಮೈಸೂರಿನವರು, ತಲಾ ಮೂವರು ದಕ್ಷಿಣ ಕನ್ನಡ ಮತ್ತು ಬೆಂಗಳೂರು ಗ್ರಾಮಾಂತರ, ತಲಾ ಒಬ್ಬರು ಕೊಡಗು ಮತ್ತು ಬೆಳಗಾವಿಯವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.