ಬೆಂಗಳೂರು: ಮನೋಜ್ (34 ), ರಕ್ಷಿತ್ (18) ಅವರ ಆಟದ ಬಲದಿಂದ ಡಿವೈಇಎಸ್ ಬೆಂಗಳೂರು ತಂಡವು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ.ಎನ್.ಸಿ. ಪರಪ್ಪ ಸ್ಮಾರಕ ಎವರ್ ರೋಲಿಂಗ್ ಟ್ರೋಫಿಯ ರಾಜ್ಯ ‘ಎ’ ಡಿವಿಷನ್‌ನ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಜಿಎಸ್‌ಟಿ ಅಂಡ್ ಕಸ್ಟಮ್ಸ್ ತಂಡವನ್ನು 77–76 ರಿಂದ ಮಣಿಸಿತು.
ಭಾನುವಾರ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಡಿವೈಇಎಸ್ ತಂಡ ಒಂದು ಗೋಲಿನ ಅಂತರದ ಜಯ ದಾಖಲಿಸಿತು. ಮಧ್ಯಂತರದ ವೇಳೆ 42–45 ರಿಂದ ಹಿನ್ನಡೆಯಲ್ಲಿದ್ದ ಡಿವೈಇಎಸ್, ನಂತರ ಮೇಲುಗೈ ಸಾಧಿಸಿತು.
ಇತರ ಪಂದ್ಯಗಳಲ್ಲಿ ಬ್ಯಾಂಕ್ ಆಫ್ ಬರೋಡಾ ತಂಡವು ಎಸ್. ಬ್ಲೂಸ್ ತಂಡವನ್ನು 70–53 ರಿಂದ, ಯಂಗ್ ಓರಿಯನ್ಸ್ ಎಸ್.ಸಿ ತಂಡವು ಐಬಿಬಿಸಿ ತಂಡವನ್ನು 90–46ರಿಂದ, ಮಂಗಳೂರು ಬಿ.ಸಿ ತಂಡವು ಬೀಗಲ್ಸ್ ಬಿ.ಸಿ ತಂಡವನ್ನು 78– 42 ರಿಂದ ಮತ್ತು ಭಾರತ್ ಎಸ್.ಯು ತಂಡವು ಎಂಎನ್‌ಕೆ ರಾವ್ ಪಾರ್ಕ್ ಬಿ.ಸಿ ತಂಡವನ್ನು 79–73 ರಿಂದ ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.