ADVERTISEMENT

ಶಾಲೆಗಳ ರಾಜ್ಯಮಟ್ಟದ ಕೂಟ: ಹನ್ಮಿತ್, ನಿತ್ಯಾ ವೇಗಿಗಳು

ಗೌತಮಿ ಗೌಡ ಹೊಸ ದಾಖಲೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 6:35 IST
Last Updated 22 ಫೆಬ್ರುವರಿ 2023, 6:35 IST
ಹೈಜಂಪ್‌ ಸ್ಪರ್ಧೆಯಲ್ಲಿ ಮಂಗಳವಾರ ದಾಖಲೆ ಬರೆದ ಶಿವಮೊಗ್ಗದ ಗೌತಮಿ ಗೌಡ ಅವರ ನೆಗೆತದ ವೈಖರಿ–ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.
ಹೈಜಂಪ್‌ ಸ್ಪರ್ಧೆಯಲ್ಲಿ ಮಂಗಳವಾರ ದಾಖಲೆ ಬರೆದ ಶಿವಮೊಗ್ಗದ ಗೌತಮಿ ಗೌಡ ಅವರ ನೆಗೆತದ ವೈಖರಿ–ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.   

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಹನ್ಮಿತ್ ಸಾಲಿಯಾನ ಮತ್ತು ಹಾಸನದ ಬಿ. ನಿತ್ಯಾ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯೋಜಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು. ಶಿವಮೊಗ್ಗದ ಗೌತಮಿ ಗೌಡ ಅವರು ಬಾಲಕಿಯರ ಹೈಜಂಪ್‌ನಲ್ಲಿ ನೂತನ ದಾಖಲೆ ನಿರ್ಮಿಸಿದರು.

ಮಂಗಳವಾರ ನಡೆದ ಬಾಲಕರ 100 ಮೀ ಓಟದಲ್ಲಿ ಹನ್ಮಿತ್ 10.81 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ರಿಹಾನ್ ಕುಮಾರ್‌ ಹಾಗೂ ಮೌನೇಶ್‌ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಹಾಸನದ ಬಿ.ನಿತ್ಯಾ 13.13 ಸೆಕೆಂಡುಗಳಲ್ಲಿ ಗೆಲುವಿನ ಗೆರೆ ದಾಟಿದರೆ, ಬಾಗಲಕೋಟೆ ಯ ವಾಣಿಶ್ರೀ ಹಾಗೂ ಬೆಳಗಾವಿಯ ಸ್ವರ ಸಂತೋಷ ಶಿಂಧೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ಬಾಲಕಿಯರ ಹೈಜಂಪ್‌ ಸ್ಪರ್ಧೆಯಲ್ಲಿ 1.58 ಮೀ ಎತ್ತರ ಜಿಗಿದು ಚಿನ್ನ ಗೆದ್ದ ಗೌತಮಿ, 2015ರಲ್ಲಿ ದಕ್ಷಿಣ ಕನ್ನಡದ ಎಸ್‌.ಬಿ.ಸುಪ್ರಿಯಾ ನಿರ್ಮಿಸಿದ್ದ (1.56 ಮೀ) ದಾಖಲೆ ಮುರಿದರು. ಬೆಂಗಳೂರು ಉತ್ತರದ ಪಿ.ಹರ್ಷಿತಾ (1.56 ಮೀ), ಬಾಗಲಕೋಟೆಯ ನಿಖಿತಾ ಲಂಬಾಣಿ (1.49 ಮೀ) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.