ADVERTISEMENT

ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಜೆಎಸ್‌ಸಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 19:04 IST
Last Updated 21 ಅಕ್ಟೋಬರ್ 2018, 19:04 IST

ಬೆಂಗಳೂರು: ಅದಿತಿ ಅವರ ಉತ್ತಮ ಆಟದ ನೆರವಿನಿಂದ ಜೆಎಸ್‌ಸಿ ತಂಡ 13 ವರ್ಷದೊಳಗಿನವರ ರಾಜ್ಯ ಸಬ್‌ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಜೆಎಸ್‌ಸಿ 47–40 ಪಾಯಿಂಟ್ಸ್‌ನಿಂದ ಮೌಂಟ್ಸ್‌ ಕ್ಲಬ್‌ ಎದುರು ಗೆದ್ದಿತು.

ವಿಜಯೀ ತಂಡದ ಅದಿತಿ 17 ಪಾಯಿಂಟ್ಸ್‌ ಗಳಿಸಿದರು. ಮೊದಲಾರ್ಧದಲ್ಲಿ 21–25ರಿಂದ ಹಿನ್ನಡೆ ಕಂಡಿದ್ದ ಜೆಎಸ್‌ಸಿ, ದ್ವಿತೀಯಾರ್ಧದಲ್ಲಿ ಮೋಡಿ ಮಾಡಿತು. ಮೌಂಟ್ಸ್‌ ಕ್ಲಬ್‌ ತಂಡದ ಕರೀಷ್ಮಾ 10 ಪಾಯಿಂಟ್ಸ್‌ ಕಲೆಹಾಕಿದರು.

ADVERTISEMENT

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಭಾರತ್‌ ಎಸ್‌ಯು 40–18 ಪಾಯಿಂಟ್ಸ್‌ನಿಂದ ಯಂಗ್‌ ಓರಿಯನ್ಸ್‌ ತಂಡವನ್ನು ಸೋಲಿಸಿತು. ಭಾರತ್‌ ತಂಡದ ಶಿಕ್ಷಿತಾ 16 ಪಾಯಿಂಟ್ಸ್‌ ಗಳಿಸಿ ಮಿಂಚಿದರು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಬೀಗಲ್ಸ್‌ ಬಿ.ಸಿ ಮತ್ತು ವಿಮಾನಪುರ ಎಸ್‌.ಸಿ ತಂಡಗಳು ಸೆಣಸಲಿವೆ.

ಮೊದಲ ಸೆಮಿಫೈನಲ್‌ನಲ್ಲಿ ಬೀಗಲ್ಸ್‌ 46–15 ಪಾಯಿಂಟ್ಸ್‌ನಿಂದ ಬಿ.ಸಿ.ಬಿ.ಸಿ ಎದುರು ಗೆದ್ದರೆ, ಮತ್ತೊಂದು ಪಂದ್ಯದಲ್ಲಿ ವಿಮಾನಪುರ 46–34 ಪಾಯಿಂಟ್ಸ್‌ನಿಂದ ಜೆಎಸ್‌ಸಿ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.