ADVERTISEMENT

ಬ್ಯಾಸ್ಕೆಟ್‌ಬಾಲ್: ಮಿಂಚಿದ ಮಿಲಿಂದ್‌

ರಾಜ್ಯ 16 ವರ್ಷದೊಳಗಿನವರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 13:47 IST
Last Updated 10 ಆಗಸ್ಟ್ 2022, 13:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮಿಲಿಂದ್‌ ದಾಖಲಿಸಿದ 31 ಪಾಯಿಂಟ್‌ಗಳ ಬಲದಿಂದ ಪಿಪಿಸಿ ತಂಡವು ರಾಜ್ಯ 16 ವರ್ಷದೊಳಗಿನವರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ದಾಖಲಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಬಾಲಕರ ವಿಭಾಗದ ಪಂದ್ಯದಲ್ಲಿ ಪಿಪಿಸಿ 93–14ರಿಂದ ಎಸ್‌. ಬ್ಲ್ಯೂಸ್‌ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ವರುಣ್‌ 13 ಪಾಯಿಂಟ್ಸ್ ಕಲೆಹಾಕಿದರು.

ಬಾಲಕರ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಎಂ.ಎನ್‌.ಕೆ. ರಾವ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ತಂಡವು 63–24ರಿಂದ ವಿಜಯನಗರ ಬಿ.ಸಿ. ಮೈಸೂರು ಎದುರು, ವಿಎನ್‌ಎಸ್‌ಸಿ 66–35ರಿಂದ ಸಾಯ್‌ ಧಾರವಾಡ ಎದುರು, ಕೋರಮಂಗಲ ಎಸ್‌ಸಿ 54–25ರಿಂದ ಮೈಸೂರು ಬಿ.ಸಿ. ವಿರುದ್ಧ, ಎಂಸಿಎಚ್‌ಎಸ್‌ 51–34ರಿಂದ ದೇವಾಂಗ ಯೂನಿಯನ್ ಎದುರು, ಬಿಸಿ. ಬಿಸಿ 58–31ರಿಂದ ನ್ಯಾಷನಲ್ಸ್ ಬಿ.ಸಿ. ಮೈಸೂರು ಎದುರು, ವಿವೇಕ್ ಎಸ್‌ಸಿ 59–38ರಿಂದ ಪಟ್ಟಾಭಿರಾಮ ಎಸ್‌ಸಿ ಎದುರು, ಬೀಗಲ್ಸ್ 49–14ರಿಂದ ಮರ್ಚಂಟ್ಸ್ ದಾವಣಗೆರೆ ಎದುರು ಗೆಲುವು ಸಾಧಿಸಿದವು.

ADVERTISEMENT

ಬಾಲಕಿಯರ ವಿಭಾಗದ ಹಣಾಹಣಿಗಳಲ್ಲಿ ಆರ್ಯನ್ಸ್ ಮೈಸೂರು 34–18ರಿಂದ ಹಲಸೂರು ಎದುರು, ಜೆಎಸ್‌ಸಿ 53–39ರಿಂದ ಭಾರತ್ ಎಸ್‌ಯು ವಿರುದ್ಧ, ಎಂ.ಎನ್‌.ಕೆ. ರಾವ್‌ 28– 15ರಿಂದ ಡಿವೈಇಎಸ್ ವಿದ್ಯಾನಗರ ಎದುರು, ಡಿವೈಇಎಸ್‌ ವಿಜಯಪುರ 64–23ರಿಂದ ಯಂಗ್ ಆರಿಯನ್ಸ್ ಎದುರು, ಬೀಗಲ್ಸ್ 34–18ರಿಂದ ಆರಿಯನ್ಸ್ ಎಸ್‌ಸಿ ಎದುರು, ಡಿವೈಇಎಸ್‌ ಮಂಡ್ಯ 29–13ರಿಂದ ನ್ಯಾಷನಲ್ಸ್ ಮೈಸೂರು ಎದುರು ಜಯ ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.