ADVERTISEMENT

ಡಿವೈಇಎಸ್‌ ಪೊನ್ನಂಪೇಟೆ ಚಾಂಪಿಯನ್‌

ರಾಜ್ಯಮಟ್ಟದ ಸಬ್‌ಜೂನಿಯರ್‌ ಹಾಕಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 15:40 IST
Last Updated 7 ಡಿಸೆಂಬರ್ 2019, 15:40 IST
ಪ್ರಶಸ್ತಿಯೊಂದಿಗೆ ಪೊನ್ನಂಪೇಟೆ ತಂಡ: ಕುಳಿತವರು (ಎಡದಿಂದ) ನಾಚಪ್ಪ ಸಿ.ಎಂ, ವಚನ್‌ ಅಯ್ಯಪ್ಪ ಎಂ.ಎಂ, ಭೀಮಯ್ಯ ಸಿ.ಪಿ, ನಾಚಪ್ಪ ಎನ್‌.ಬಿ, ಆರ್ಯನ್‌ ಎಂ.ಟಿ, ನಂಜುಂಡ ಎಂ.ಸಿ, ತಿಮ್ಮಯ್ಯ ಸಿ.ಸಿ. ಹಾಗೂ ಮೋಕ್ಷಿತ್‌ ಬಿ.ಯು. ನಿಂತವರು–ತರುಣ್‌ ಕೆ.ಕೆ, ಗೌರವ್‌ ಸಿ.ಎಂ, ನಿಶಿಕ್‌ ಕೆ.ಆರ್‌, ಬಿಪಿನ್‌ ಬಿ.ಆರ್‌, ವಚನ್‌ ಎಚ್‌.ಎ, ಸುಬ್ಬಯ್ಯ (ಮ್ಯಾನೇಜರ್‌), ಚೆಂಗಪ್ಪ ಬಿ.ಬಿ. (ಕೋಚ್‌), ಉಜ್ವಲ್‌ ಪಿ.ಎಸ್‌., ಸಪನ್‌ ಪಿ.ಪಿ, ಮೌರ್ಯ ಎಚ್‌.ಎಸ್‌. ಹಾಗೂ ಚೆಂಗಪ್ಪ ಜಿ.ಟಿ.– ಪ್ರಜಾವಾಣಿ ಚಿತ್ರ

ಬೆಂಗಳೂರು: ಬಿಪಿನ್‌. ಬಿ.ಆರ್‌. ಎರಡು ಗೋಲು ಗಳಿಸಿ ಮಿಂಚಿದರು. ಅವರ ಆಟದ ಬಲದಿಂದ ಡಿವೈಇಎಸ್‌ ಪೊನ್ನಂಪೇಟೆ ತಂಡವು ರಾಜ್ಯಮಟ್ಟದ ಸಬ್‌ಜೂನಿಯರ್‌ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಧರಿಸಿತು.

ಇಲ್ಲಿನ ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಪೊನ್ನಂಪೇಟೆ ತಂಡವು ಡಿವೈಇಎಸ್‌ ಕೂಡಿಗೆ ‘ಎ’ ತಂಡವನ್ನು 3–0ಯಿಂದ ಮಣಿಸಿತು. ವಿಜೇತ ತಂಡದ ಬಿಪಿನ್‌ ಅವರು 23 ಹಾಗೂ 29ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ತಿಮ್ಮಯ್ಯ (2ನೇ ನಿಮಿಷ) ಒಂದು ಗೋಲು ಹೊಡೆದರು.

ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಡಿವೈಇಎಸ್‌ ಬಳ್ಳಾರಿ ತಂಡವು ಹಾಕಿ ಕೂರ್ಗ್‌ ಎದುರು 1–0ಯಿಂದ ಗೆದ್ದಿತು. ಬಳ್ಳಾರಿ ಪರ ರುದ್ರಪ್ಪ 7ನೇ ನಿಮಿಷ ಯಶಸ್ಸು ಕಂಡರು.

ADVERTISEMENT

ವೈಯಕ್ತಿಕ ಪ್ರಶಸ್ತಿಗಳು: ಅತ್ಯುತ್ತಮ ಗೋಲ್‌ಕೀಪರ್‌–ಮಾಜ್‌ (ಡಿವೈಇಎಸ್‌ ಕೂಡಿಗೆ),ಅತ್ಯುತ್ತಮ ಫುಲ್‌ ಬ್ಯಾಕ್‌ ಆಟಗಾರ–ಪೂನಚ್ಚ ಸಿ.ಜಿ. (ಹಾಕಿ ಕೂರ್ಗ್‌),ಅತ್ಯುತ್ತಮ ಹಾಫ್‌ ಬ್ಯಾಕ್‌ ಆಟಗಾರ–ದರ್ಶನ್‌ ನಾಯ್ಕ್‌ (ಡಿವೈಇಎಸ್‌ ಬಳ್ಳಾರಿ),ಅತ್ಯುತ್ತಮ ಫಾವರ್ಡ್‌ ಆಟಗಾರ–ಸಪನ್‌ ಪಿ.ಪಿ. (ಡಿವೈಇಎಸ್‌ ಪೊನ್ನಂಪೇಟೆ), ಟೂರ್ನಿಯ ಶ್ರೇಷ್ಠ ಆಟಗಾರ– ಬಿಪಿನ್‌.ಬಿ.ಆರ್‌. (ಡಿವೈಇಎಸ್‌ ಪೊನ್ನಂಪೇಟೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.