ಪ್ರಾತಿನಿಧಿಕ ಚಿತ್ರ
ಹೊಸಪೇಟೆ: ಉತ್ತಮ ಲಯದಲ್ಲಿರುವ ಸುಚೇತ್ ಸಿ.ಧರೆಣ್ಣವರ 11–5, 11–9, 11–7 ನೇರ ಸೆಟ್‌ಗಳಿಂದ ಶರ್ವಿಲ್ ಕರಂಬೆಳ್ಕರ್ ವಿರುದ್ಧ ಜಯಗಳಿಸಿ, ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಹೋಪ್ (11 ವರ್ಷದೊಳಗಿನವರ) ಬಾಲಕರ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಬಾಲಕಿಯರ ವಿಭಾಗದ ಪ್ರಶಸ್ತಿ ಸಾಕ್ಷ್ಯಾ ಸಂತೋಷ್ ಪಾಲಾಯಿತು.
ಇಲ್ಲಿನ ಟಿ.ಬಿ.ಡ್ಯಾಮ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ವಿಜಯನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಮೂರು ದಿನಗಳ ಈ ಟೂರ್ನಿ ಗುರುವಾರ ಆರಂಭವಾಯಿತು. ಸೆಮಿಫೈನಲ್ ಪಂದ್ಯಗಳಲ್ಲಿ ಸುಚೇತ್ 7–11, 11–8, 11–8, 11–4 ರಿಂದ ಅಂಕುಶ್ ಬಾಳಿಗ ವಿರುದ್ಧ, ಶರ್ವಿಲ್ ಕರಂಬೆಳಕರ್ 11–5, 11–8, 11–6 ರಿಂದ ಆರ್ನವ್ ಮಿಥುನ್ ವಿರುದ್ಧ ಜಯಗಳಿಸಿದ್ದರು.
ಬಾಲಕಿಯರ ಫೈನಲ್‌ನಲ್ಲಿ ಸಾಕ್ಷ್ಯಾ 11–7, 9–11, 12–10, 11–9 ರಿಂದ ಆದ್ಯಾ ಎಂ. ವಿರುದ್ಧ ಜಯಗಳಿಸಿದಳು.
ಸೆಮಿಫೈನಲ್ ಪಂದ್ಯಗಳಲ್ಲಿ ಆದ್ಯಾ 11–6, 11–8, 11–6 ರಿಂದ ಆ್ಯಂಜೆಲಿನಾ ಕ್ರಿಸ್ಟಿ ಪ್ರದೀಪ್ ವಿರುದ್ಧ, ಸಾಕ್ಷ್ಯಾ ಸಂತೋಷ್ 11–9, 11–6, 11–6 ರಿಂದ ಸೃಷ್ಟಿ ಧಾರಿವಾಲ್ ವಿರುದ್ಧ ಜಯಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.