ADVERTISEMENT

ಟೇಬಲ್ ಟೆನಿಸ್: ಸುಜನ್‌, ತೃಪ್ತಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 19:21 IST
Last Updated 6 ಸೆಪ್ಟೆಂಬರ್ 2019, 19:21 IST
ಸುಜನ್ ಭಾರದ್ವಾಜ್ ಆಟದ ಶೈಲಿ –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್
ಸುಜನ್ ಭಾರದ್ವಾಜ್ ಆಟದ ಶೈಲಿ –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್   

ಬೆಂಗಳೂರು: ಸುಜನ್ ಭಾರದ್ವಾಜ್ ಮತ್ತು ತೃಪ್ತಿ ಪುರೋಹಿತ್ ಇಲ್ಲಿ ನಡೆಯುತ್ತಿರುವ ಆರ್‌.ಎಸ್.ಶಕುಂತಲಾ ಸ್ಮಾರಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಜೂನಿಯರ್ ಬಾಲಕರ ಫೈನಲ್ ಪಂದ್ಯದಲ್ಲಿ ಸುಜನ್ 11–3, 9–11, 2–11, 3–11, 11–5, 11–8, 14–12ರಲ್ಲಿ ಆಕಾಶ್‌ ಜೆ.ಕೆ ಎದುರು ಗೆಲುವು ಸಾಧಿಸಿದರು. ತೃಪ್ತಿ ಫೈನಲ್‌ ಪಂದ್ಯದಲ್ಲಿ ಶ್ವೇತಾ ಪಿ ವಿರುದ್ಧ 11–8, 7–11, 11–2, 13–11, 11–7ರಲ್ಲಿ ಜಯ ಸಾಧಿಸಿದರು.

ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ವಿರುದ್ಧ ಆಕಾಶ್‌ ಮತ್ತು ರೋಹಿತ್ ಶಂಕರ್ ವಿರುದ್ಧ ಸುಜನ್ ಭಾರದ್ವಾಜ್ ಗೆಲುವು ಸಾಧಿಸಿದರು. ದೇಶ್ನಾ ವಂಶಿಕಾ ವಿರುದ್ಧ ತೃಪ್ತಿ ಪುರೋಹಿತ್ ಮತ್ತು ಸಹನಾ ಮೂರ್ತಿ ವಿರುದ್ಧ ಶ್ವೇತಾ ಜಯ ಗಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.