ADVERTISEMENT

ವಿಶ್ವಕಪ್ ಶೂಟಿಂಗ್‌:ಬೆಳ್ಳಿ ಜಯಿಸಿದ ಸ್ವಪ್ನಿಲ್‌

ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌: ಟೂರ್ನಿಯಲ್ಲಿ ಭಾರತಕ್ಕೆ ಎರಡನೇ ಪದಕ

ಪಿಟಿಐ
Published 2 ಜೂನ್ 2022, 19:32 IST
Last Updated 2 ಜೂನ್ 2022, 19:32 IST
ಸ್ವಪ್ನಿಲ್ ಕುಶಾಲೆ
ಸ್ವಪ್ನಿಲ್ ಕುಶಾಲೆ   

ನವದೆಹಲಿ: ಭಾರತದ ಸ್ವಪ್ನಿಲ್ ಕುಶಾಲೆ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆಯುತ್ತಿರುವ ಟೂರ್ನಿಯ 50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಗುರುವಾರ ಅವರಿಗೆ ಪದಕ ಒಲಿದಿದೆ. 26 ವರ್ಷದ ಸ್ವಪ್ನಿಲ್‌, ಫೈನಲ್‌ನಲ್ಲಿ 10–16ರಿಂದ ಉಕ್ರೇನ್‌ನ ಸೆರಿಯ್ ಕಲಿಶ್‌ ಅವರಿಗೆ ಸೋತರು. 2016ರರಿಯೊ ಒಲಿಂಪಿಕ್ಸ್‌ನಲ್ಲಿ ಕಲಿಶ್ ಬೆಳ್ಳಿ ಪದಕ ಗಳಿಸಿದ್ದರು. ರ‍್ಯಾಂಕಿಂಗ್ ಸುತ್ತಿನಲ್ಲಿ ಕಲಿಶ್‌ 411 ಪಾಯಿಂಟ್ಸ್ ಗಳಿಸಿದರೆ, ಸ್ವಪ್ನಿಲ್‌ 409.1 ಪಾಯಿಂಟ್ಸ್ ಕಲೆಹಾಕಿದ್ದರು. ಕಂಚು ಜಯಿಸಿದ ಫಿನ್ಲೆಂಡ್‌ನ ಅಲೆಕ್ಸಿ 407.8 ಪಾಯಿಂಟ್ಸ್ ಸಂಗ್ರಹಿಸಿದ್ದರು. ಫೈನಲ್‌ನಲ್ಲಿ ಸ್ವಪ್ನಿಲ್ ಅವರಿಂದ ಹೆಚ್ಚು ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ ಉಕ್ರೇನ್ ಶೂಟರ್‌ ಪ್ರಾಬಲ್ಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT