ADVERTISEMENT

ಡಬ್ಲ್ಯುಟಿಟಿ: ಭಾರತ ತಂಡಕ್ಕೆ ಯಶಸ್ವಿನಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:21 IST
Last Updated 14 ಮೇ 2025, 14:21 IST
ಯಶಸ್ವಿನಿ ಘೋರ್ಪಡೆ 
ಯಶಸ್ವಿನಿ ಘೋರ್ಪಡೆ    

ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ದೋಹಾದಲ್ಲಿ ನಡೆಯಲಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಟಿ) ಆಡಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. 

ಇದೇ 17ರಿಂದ 25ರವರೆಗೆ ಡಬ್ಲ್ಯುಟಿಟಿ ನಡೆಯಲಿದೆ. ಯಶಸ್ವಿನಿ ಅವರು ಮಹಿಳೆಯರ ಸಿಂಗಲ್ಸ್‌, ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಆಡುವರು ಎಂದು  ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆ ಕಾರ್ಯದರ್ಶಿ ಕೆ.ಆರ್. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಭಾರತ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್‌ಐ) ಪ್ರಕಟಿಸಿರುವ ತಂಡ ಇಂತಿದೆ:

ADVERTISEMENT

ಪುರುಷರು: ಸಿಂಗಲ್ಸ್‌: ಮಾನವ ಠಕ್ಕರ್, ಮಾನುಷ್ ಶಾ, ಸತ್ಯನ್ ಜ್ಙಾನೇಶ್‌ಕರಣ್, ಅಂಕುರ್ ಭಟ್ಟಾಚಾರ್ಯಜೀ  ಡಬಲ್ಸ್: ಮಾನವ್–ಮಾನೂಷ್, ಸತ್ಯನ್–ಹರ್ಮೀತ್‌.

ಮಹಿಳೆಯರು: ಸಿಂಗಲ್ಸ್‌: ಶ್ರೀಜಾ ಅಕುಲಾ, ಮಣಿಕಾ ಬಾತ್ರಾ, ದಿಯಾ ಚಿತಳೆ, ಯಶಸ್ವಿನಿ ಘೋರ್ಪಡೆ. ಡಬಲ್ಸ್: ಐಹಿಕಾ ಮುಖರ್ಜಿ–ಸುತೀರ್ಥ ಮುಖರ್ಜಿ, ದಿಯಾ–ಯಶಸ್ವಿನಿ. 

ಮಿಶ್ರ ಡಬಲ್ಸ್‌: ಮನುಷ್‌–ದಿಯಾ, ಹರ್ಮಿತ್–ಯಶಸ್ವಿನಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.