ADVERTISEMENT

ತೆಲುಗು ಟೈಟನ್ಸ್ ಗೆಲುವಿನಲ್ಲಿ ಮಿಂಚಿದ ವಿಜಯ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 19:41 IST
Last Updated 30 ಸೆಪ್ಟೆಂಬರ್ 2025, 19:41 IST
<div class="paragraphs"><p>ಪ್ರೊ ಕಬಡ್ಡಿ ಲೀಗ್</p></div>

ಪ್ರೊ ಕಬಡ್ಡಿ ಲೀಗ್

   

ಚೆನ್ನೈ (ಪಿಟಿಐ): ನಾಯಕ ವಿಜಯ್ ಮಲಿಕ್ ಅವರ ಅಮೋಘ ಪ್ರದರ್ಶನದಿಂದ ತೆಲುಗು ಟೈಟನ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಮಂಗಳವಾರ 37–28 ರಿಂದ ಪಟ್ನಾ ಪೈರೇಟ್ಸ್ ತಂಡವನ್ನು 9 ಪಾಯಿಂಟ್‌ಗಳಿಂದ ಸೋಲಿಸಿತು.

‌ಎಸ್‌ಡಿಎಟಿ ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ಹೊನಲು ಬೆಳಕಿನಲ್ಲಿ ಮಿಂಚಿ 13 ಪಾಯಿಂಟ್ಸ್ ಕಲೆಹಾಕಿದರು. ಅವರ ಸೂಪರ್‌ಟೆನ್‌ ಸಾಧನೆಯಿಂದ ಟೈಟನ್‌ ಸತತ ಮೂರನೇ ಗೆಲುವನ್ನು ದಾಖಲಿಸಿತಲ್ಲದೇ,‌ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

ADVERTISEMENT

ಪಟ್ನಾ ಪೈರೇಟ್ಸ್ ತಂಡದ ಅಯಾನ್ ಲೋಚಬ್ ಸಹ ಉತ್ತಮ ರೇಡಿಂಗ್ ಪ್ರದರ್ಶಿಸಿ ಸೂಪರ್ ಟೆನ್‌ ಸಾಧಿಸಿದರೂ, ಟೈಟನ್‌ ತಂಡದ ಸರ್ವಾಂಗೀಣ ಆಟದೆದುರು ಅವರ ಒಳ್ಳೆಯ ಆಟ ಫಲ ನೀಡಲಿಲ್ಲ.

ಹೆಚ್ಚಿನ ಸ್ಕೋರುಗಳನ್ನು ಕಂಡ ದಿನದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ 37–28 ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿತು. ಬೆಂಗಾಲ್‌ ವಾರಿಯರ್ಸ್ ತಂಡದ ನಾಯಕ ದೇವಾಂಕ್‌ ಗಳಿಸಿದ 25 ಪಾಯಿಂಟ್ಸ್‌ ಫಲ ನೀಡಲಿಲ್ಲ. ಹಿಮಾಂಶು ನರ್ವಾಲ್ (7) ಬಿಟ್ಟರೆ ಉಳಿದವರಿಂದ ಅವರಿಗೆ ಬೆಂಬಲ ಸಿಗಲಿಲ್ಲ. 

ವಿಜೇತ ಪಲ್ಟನ್ ಪರ ಆದಿತ್ಯ ಶಿಂದೆ 18, ಪಂಕಜ್ ಮೋಹಿತೆ 10 ಮತ್ತು ನಾಯಕ ಅಸ್ಲಂ ಇನಾಮದಾರ 7 ಪಾಯಿಂಟ್ಸ್ ಕಲೆಹಾಕಿ ಸಾಂಘಿಕ ಪ್ರದರ್ಶನ ನೀಡಿದರು.

ಬುಧವಾರದ ಪಂದ್ಯಗಳು: ಹರಿಯಾಣ ಸ್ಟೀಲರ್ಸ್‌– ಜೈಪುರ ಪಿಂಕ್‌ ಪ್ಯಾಂಥರ್ಸ್ (ರಾತ್ರಿ 8.00); ಯು ಮುಂಬಾ– ತಮಿಳು ತಲೈವಾಸ್ (9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.