ADVERTISEMENT

ಜಬಿವುರ್‌ ಎದುರು ಸೋತ ಸಬಲೆಂಕಾ

ರಾಯಿಟರ್ಸ್
Published 3 ಅಕ್ಟೋಬರ್ 2020, 14:32 IST
Last Updated 3 ಅಕ್ಟೋಬರ್ 2020, 14:32 IST
ಆನ್ಸ್ ಜಬಿವುರ್‌ ಆಟದ ಪರಿ–ರಾಯಿಟರ್ಸ್ ಚಿತ್ರ
ಆನ್ಸ್ ಜಬಿವುರ್‌ ಆಟದ ಪರಿ–ರಾಯಿಟರ್ಸ್ ಚಿತ್ರ   

ಪ್ಯಾರಿಸ್‌ : ಟ್ಯೂನಿಷಿಯಾದ ಆನ್ಸ್ ಜಬಿವುರ್ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ ಮೊದಲ ಅರಬ್‌ ಮಹಿಳೆ ಎನಿಸಿಕೊಂಡರು. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು 7–6, 2–6, 6–3ರಿಂದ ಎಂಟನೇ ಶ್ರೇಯಾಂಕದ ಅರಿನಾ ಸಬಲೆಂಕಾ ಅವರಿಗೆ ಆಘಾತ ನೀಡಿದರು.

2017ರ ಆವೃತ್ತಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದ ಜಬಿವುರ್‌, ಈ ಹಣಾಹಣಿಯಲ್ಲಿ ಸಬಲೆಂಕಾ ಎದುರು ಪಾರಮ್ಯ ಮೆರೆದರು.

ಇಲ್ಲಿ 30ನೇ ಶ್ರೇಯಾಂಕದ ಪಡೆದಿರುವ ಜಬಿವುರ್‌, ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪುವ ಮೂಲಕ ಗ್ರ್ಯಾನ್‌ಸ್ಲಾಮ್‌ ಒಂದರಲ್ಲಿ ಈ ಸಾಧನೆ ಮಾಡಿದ ಮೊದಲ ಅರಬ್‌ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.