ADVERTISEMENT

ಟೆನಿಸ್‌: ವರದ್‌ಗೆ ಅನುರಾಗ್‌ ಆಘಾತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 22:51 IST
Last Updated 23 ಏಪ್ರಿಲ್ 2024, 22:51 IST
   

ಬೆಂಗಳೂರು: ಅನುರಾಗ್ ಶೌರ್ಯ ಅವರು ಏಷ್ಯನ್‌ ರ್‍ಯಾಂಕಿಂಗ್ 16 ವರ್ಷದೊಳಗಿನವರ ಟೆನಿಸ್‌ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ವರದ್‌ ಪೋಲ್‌ ಅವರಿಗೆ ಆಘಾತ ನೀಡಿದರು.

ಇಲ್ಲಿನ ಟಾಪ್‌ಸ್ಪಿನ್‌ ಟೆನಿಸ್‌ ಅಕಾಡೆಮಿ ಅಂಗಳದಲ್ಲಿ ಮಂಗಳವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಅನುರಾಗ್‌ ಅವರು 6–1, 6–1ರಿಂದ ವರದ್‌ ಅವರನ್ನು ಹಿಮ್ಮೆಟ್ಟಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಎರಡನೇ ಶ್ರೇಯಾಂಕದ ತೇಜಸ್‌ ರವಿ ಮತ್ತು ಮೂರನೇ ಶ್ರೇಯಾಂಕದ ನಿವೇದ್ ಪೊನ್ನಪ್ಪ ಕೂಡ ಎಂಟರ ಘಟ್ಟಕ್ಕೆ ಮುನ್ನಡೆದರು.

ADVERTISEMENT

ಬಾಲಕಿಯರ ಸಿಂಗಲ್ಸ್‌ನಲ್ಲಿ ಅನ್ವಿ ಪಿ. 6-1, 6-1ರಿಂದ ಮೂರನೇ ಶ್ರೇಯಾಂಕದ ಜೋಶಿತಾ ಎಸ್‌. ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಅಗ್ರ ಶ್ರೇಯಾಂಕದ ಶೈವಿ ಗೌರವ್ ದಲಾಲ್ ಮುನ್ನಡೆದರು.‌‌ ಆದರೆ, ಎರಡನೇ ಶ್ರೇಯಾಂಕದ ರಿದ್ಧಿ ಶಿಂಧೆ 3-6, 3-6ರಿಂದ ಪೂಜಾ ನಾಗರಾಜ್‌ ಅವರಿಗೆ ಶರಣಾದರು.

ಎರಡನೇ ಸುತ್ತಿನ ಫಲಿತಾಂಶ

ಬಾಲಕರ ಸಿಂಗಲ್ಸ್‌: ಕೃಶಾಂಕ್ ಜೋಶಿ 6-2, 6-3ರಿಂದ ಕಬೀರ್ ಜೇಟ್ಲಿ ವಿರುದ್ಧ; ಶ್ರೀಕರ್ ದೋಣಿ 3-6, 5-0ಯಿಂದ ಲಿಕಿತ್ ಎಸ್. ಗೌಡ (ನಿವೃತ್ತಿ) ವಿರುದ್ಧ; ನಿವೇದ್ ಪೊನ್ನಪ್ಪ 6-2, 6-0ಯಿಂದ ಧ್ರುವ ಹೆಗ್ಡೆ ವಿರುದ್ಧ; ಪ್ರಕಾಶ್ ಸರ್ರನ್ 6-1, 6-3ರಿಂದ ಅಯನ್ ಶೆಟ್ಟಿ ವಿರುದ್ಧ; ಶಾರ್ದೂಲ್ ಖವಾಲೆ 6-3, 6-3ರಿಂದ ಅಹಾನ್ ಶೆಟ್ಟಿ ವಿರುದ್ಧ; ಅನುರಾಗ್ ಶೌರ್ಯ 6-1,6-1ರಿಂದ ವರದ್ ಪೋಲ್ ವಿರುದ್ಧ; ಲೆವಿನ್ ಸಫೂರ್ ಮೈದೀನ್ 7-5, 6-0ಯಿಂದ ಕ್ರಿಸ್ಟೋ ಬಾಬು ವಿರುದ್ಧ; ತೇಜಸ್ ರವಿ 6-2,6-3ರಿಂದ ಅಯಾನ್ ಮೊಹಮ್ಮದ್ ಖಾನ್ ವಿರುದ್ಧ ಗೆಲುವು ಸಾಧಿಸಿದರು.

ಬಾಲಕಿಯರ ಸಿಂಗಲ್ಸ್‌: ಶೈವಿ ಗೌರವ್ 6-1, 6-1ರಿಂದ ಆದ್ಯಾ ಚೌರಾಸಿಯಾ ಎದುರು; ಮೇಘನಾ ಜಿ.ಡಿ. 6-2, 2-6, 6-2ರಿಂದ ಕೀರ್ತನಾ ರಂಗಿನೇನಿ ಎದುರು; ಅನ್ವಿ ಪಿ. 6-1, 6-1ರಿಂದ ಜೋಶಿತಾ ಸಂತಾನಕೃಷ್ಣನ್ ಎದುರು; ಕಶ್ವಿ ಸುನಿಲ್‌ 6–3, 7–5ರಿಂದ ಆದಿಯಾ ರಿತೇಶ್ ಕುಮಾರ್ ಎದುರು; ಧಾರಿಣಿ ಗೌಡ 6-2, 6-3ರಿಂದ ಜಾಹ್ನವಿ ಚೌಧರಿ ಎದುರು; ಅಹಿದಾ ಸಿಂಗ್ 6-0, 6-1ರಿಂದ ರಿಷಿತಾ ಚೌಧರಿ ಎದುರು; ದೀಪ್ಶಿಕಾ ವಿ. 6-1, 6-1ರಿಂದ ಧೃತಿ ಸಾಂದ್ರ ಎದುರು; ಪೂಜಾ ನಾಗರಾಜ 6-3, 6-3ರಿಂದ ರಿದ್ಧಿ ಶಿಂಧೆ ಎದುರು ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.