
ಬೆಂಗಳೂರು: ಕರ್ನಾಟಕದ ಅಗ್ರ ಶ್ರೇಯಾಂಕದ ಆಟಗಾರ ಬಿ. ಅವ್ಯಾನ್ ಅವರು ಮುರುಗನ್ ಟೆನಿಸ್ ಅಕಾಡೆಮಿ ಆಯೋಜಿಸಿರುವ ಎಐಟಿಎ 12 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಬಾಲಕಿಯರ ವಿಭಾಗದಲ್ಲಿ ಉತ್ತರಪ್ರದೇಶದ ಲಾವಣ್ಯ ಸಿಂಗ್ ಕಿರೀಟ ತಮ್ಮದಾಗಿಸಿಕೊಂಡರು.
ಅವ್ಯಾನ್, ಬಾಲಕರ ವಿಭಾಗದ ಫೈನಲ್‌ನಲ್ಲಿ 6–3, 6–2ರಿಂದ ಕರ್ನಾಟಕದವರೇ ಆದ ದರ್ಶ್ ಎಂ. ಅವರನ್ನು ಸುಲಭವಾಗಿ ಮಣಿಸಿದರು. ಅದರೊಂದಿಗೆ, ಟೂರ್ನಿಯಲ್ಲಿ ಪ್ರಶಸ್ತಿ ಡಬಲ್ ಸಾಧಿಸಿದರು.
ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಲಾವಣ್ಯ ಅವರು 1–6ರಿಂದ ಕರ್ನಾಟಕದ ರಚೆಲ್ ರಾಯುಡು ಎದುರು ಮೊದಲ ಸೆಟ್ ಕಳೆದುಕೊಂಡರು. ಬಳಿಕ ಚೇತರಿಸಿಕೊಂಡು 6–2, 6–2 ಅಂತರದಲ್ಲಿ ಸತತ ಎರಡು ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿದರು. ಅದರೊಂದಿಗೆ ಪಂದ್ಯವನ್ನು ತಮ್ಮದಾಗಿಸಿಕೊಂಡು, ಪ್ರಶಸ್ತಿಗೆ ಕೊರಳೊಡ್ಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.