ADVERTISEMENT

ಥಾಯ್ಲೆಂಡ್‌ ಮಾಸ್ಟರ್ಸ್‌: ಮುಖ್ಯಸುತ್ತಿಗೆ ಅಸ್ಮಿತಾ

Ashmita Chaliha enters main draw at Thailand Masters

ಪಿಟಿಐ
Published 27 ಜನವರಿ 2026, 17:46 IST
Last Updated 27 ಜನವರಿ 2026, 17:46 IST
ಭಾರತದ ಅಸ್ಮಿತಾ ಚಾಲಿಹಾ
ಭಾರತದ ಅಸ್ಮಿತಾ ಚಾಲಿಹಾ   

ಬ್ಯಾಂಕಾಕ್‌: ಭಾರತದ ಅಸ್ಮಿತಾ ಚಾಲಿಹಾ ಅವರು ಮಂಗಳವಾರ ಆರಂಭವಾದ ಥಾಯ್ಲೆಂಡ್‌ ಮಾಸ್ಟರ್ಸ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಪ್ರಧಾನ ಸುತ್ತು ಪ್ರವೇಶಿಸಿದರು.

26 ವರ್ಷ ವಯಸ್ಸಿನ ಗುವಾಹಟಿಯ ಆಟಗಾರ್ತಿ ಕ್ವಾಲಿಫೈಯರ್‌ ಪಂದ್ಯಗಳಲ್ಲಿ 21–15, 12–21, 21–12ರಿಂದ ತೈವಾನ್‌ನ ಹಂಗ್‌ ಯಿ–ಟಿಂಗ್‌ ವಿರುದ್ಧ ಹಾಗೂ 21–11, 10–21, 21–16ರಿಂದ ಕೊರಿಯಾದ ಕಿಮ್‌ ಜೂ ಯೂನ್‌ ವಿರುದ್ಧ ಗೆಲುವು ಸಾಧಿಸಿದರು. ಅವರು ಮುಖ್ಯ ಸುತ್ತಿನಲ್ಲಿ ಭಾರತದ ದೇವಿಕಾ ಸಿಹಾಗ್‌ ಅವರನ್ನು ಎದುರಿಸಲಿದ್ದಾರೆ.

ಆದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಶ್ರೇಯಾ ಲೆಲೆ 12–21, 21–12, 15–21ರಿಂದ ಇಂಡೊನೇಷ್ಯಾದ ನಿ ಕಡೆಕ್‌ ದಿಂಡಾ ಅಮರ್ತ್ಯ ಪ್ರತಿವಿ ಎದುರು ಪರಾಭವಗೊಂಡರು. ಮಿಶ್ರ ಡಬಲ್ಸ್‌ನಲ್ಲಿ ಮೋಹಿತ್‌ ಜಾಗಲನ್‌ ಹಾಗೂ ಲಕ್ಷಿತಾ ಜಾಗಲನ್‌ ಅವರು 12–21, 8–21ರಿಂದ ತೈವಾನ್‌ನ ಬೊ–ಯುವಾನ್‌ ಶೆನ್‌ ಹಾಗೂ ಸಂಗ್‌ ಯಿ–ಸುವಾನ್‌ ವಿರುದ್ಧ ಸೋತರು.

ADVERTISEMENT

ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಪಿ.ಕೃಷ್ಣಮೂರ್ತಿ ರಾಯ್‌– ಸಾಯಿ ಪ್ರತೀಕ್‌ ಕೆ. ಜೋಡಿಯು 20–22, 20–22ರಲ್ಲಿ ನಾಲ್ಕನೇ ಶ್ರೇಯಾಂಕದ, ಮಲೇಷ್ಯಾದ ಎನ್‌.ಅಝ್ರಿನ್‌– ತಾನ್‌ ಡಬ್ಲ್ಯು.ಕೆ. ಅವರಿಗೆ ಮಣಿಯಿತು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನ್‌ ಭಟ್‌ ಕೆ. ಮತ್ತು ಶಿಖಾ ಗೌತಮ್‌ ಅವರು 14–21, 12–21ರಿಂದ ಇಂಡೊನೇಷ್ಯಾದ ಎಫ್‌.ಡಿ. ಕುಸುಮ– ಎಂ.ಪುಸ್ಪಿತ್‌ಸಾರಿ ಜೋಡಿ ವಿರುದ್ಧ ಸೋಲಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.