ADVERTISEMENT

WWE ಸೂಪರ್‌ಸ್ಟಾರ್‌ ಅಂಡರ್‌ಟೇಕರ್‌ ನಿವೃತ್ತಿ ಘೋಷಣೆ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2020, 16:20 IST
Last Updated 22 ಜೂನ್ 2020, 16:20 IST
WWE ಸೂಪರ್‌ಸ್ಟಾರ್‌ ಅಂಡರ್‌ ಟೇಕರ್‌ (ಟ್ವಿಟರ್‌ ಚಿತ್ರ)
WWE ಸೂಪರ್‌ಸ್ಟಾರ್‌ ಅಂಡರ್‌ ಟೇಕರ್‌ (ಟ್ವಿಟರ್‌ ಚಿತ್ರ)   

ಡಬ್ಲ್ಯುಡಬ್ಲ್ಯುಇ ದಂತಕಥೆ, ಕುಸ್ತಿ ಕ್ಷೇತ್ರದ ಸೂಪರ್‌ ಸ್ಟಾರ್‌ ‘ದಿ ಅಂಡರ್‌ಟೇಕರ್‌’ ಅವರು ಸೋಮವಾರ ಡಬ್ಲ್ಯುಡಬ್ಲ್ಯುಇನಿಂದ ಜಗತ್ತಿಗೆ ನಿವೃತ್ತಿ ಘೋಷಿಸಿದ್ದಾರೆ.

ಡಬ್ಲ್ಯುಡಬ್ಲ್ಯುಇ ‘ದಿ ಲಾಸ್ಟ್‌ ರೈಡ್‌’ ಎಂಬ ಆವೃತ್ತಿಯಲ್ಲಿ ಅಂಡರ್‌ ಟೇಕರ್‌ ಅವರು ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಒಳ್ಳೆಯದ್ದಕಾಗಿ ನಾನು ರಿಂಗ್‌ (ಕುಸ್ತಿ ಅಖಾಡ) ತೊರೆಯುತ್ತಿರುವುದಾಗಿ ಅವರು ಹೇಳಿದ್ದರು. ಅಂಡರ್‌ ಟೇಕರ್‌ ಅವರ ಕೊನೆಯ ಪಂದ್ಯವು ‘ರೆಸಲ್‌ಮೇನಿಯಾ 36’ ರಲ್ಲಿ ಎಜೆ ಸ್ಟೈಲ್ಸ್ ವಿರುದ್ಧ ನಡೆಯಿತು.

‘ರಸ್ತೆ ಎಷ್ಟು ದೂರವಿತ್ತು ಎಂದು ರಸ್ತೆಯ ಕೊನೆಯ ವರೆಗೆ ಸವಾರಿ ಮಾಡದೇ ನೀವು ಪ್ರಶಂಸೆಗೆ ಒಳಗಾಗುವುದಿಲ್ಲ,’ ಎಂದು ಅಂಡರ್‌ಟೇಕರ್‌ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಅಂಡರ್‌ಟೇಕರ್‌ ಅವರ ನಿವೃತ್ತಿಗೆ ಡಬ್ಲ್ಯುಡಬ್ಲ್ಯುಇ ಸರಣಿ ಟ್ವೀಟ್‌ಗಳ ಮೂಲಕ ಧನ್ಯವಾದ ಅರ್ಪಿಸಿದೆ. ಅವರ ಮರೆಯಲಾಗದ ಕಾಳಗಗಳ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಸ್ಮರಿಸುತ್ತಿದೆ.

‘ನನ್ನ ದಾರಿಯಲ್ಲಿ ನಾನು ಮಾಡಬೇಕಾದ್ದನ್ನು ಮಾಡಿದ್ದೇನೆ. ಈಗ ದಾರಿಯಿಂದ ಸರಿಯುತ್ತಿದ್ದೇನೆ,’ ಎಂಬ ಅಂಡರ್‌ಟೇಕರ್‌ ಹೇಳಿಕೆಯನ್ನು ಡಬ್ಲ್ಯುಡಬ್ಲ್ಯುಇ ತನ್ನ ಟ್ವಿಟರ್‌ ಖಾತೆಯಲ್ಲಿ ಉಲ್ಲೇಖಿಸಿ‌ದೆ.

ಅಂಡರ್‌ಟೇಕರ್‌ ನಿವೃತ್ತಿಗೆ ಕುಸ್ತಿಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲೂ ನೆಟ್ಟಿಗರು ಅತೀವ ನಿರಾಸೆ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.