ADVERTISEMENT

ಈಶ ಗ್ರಾಮೋತ್ಸವ | ಥ್ರೋಬಾಲ್‌ ಸ್ಪರ್ಧೆ: ಕಾಂತೂರು ಫ್ರೆಂಡ್ಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 16:01 IST
Last Updated 29 ಡಿಸೆಂಬರ್ 2024, 16:01 IST
16ನೇ ಈಶ ಗ್ರಾಮೋತ್ಸವದ ಮಹಿಳೆಯರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಮಾರ್ನಾಡಿನ ಕಾಂತೂರು ಫ್ರೆಂಡ್ಸ್‌ ತಂಡ
16ನೇ ಈಶ ಗ್ರಾಮೋತ್ಸವದ ಮಹಿಳೆಯರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಮಾರ್ನಾಡಿನ ಕಾಂತೂರು ಫ್ರೆಂಡ್ಸ್‌ ತಂಡ   

ಬೆಂಗಳೂರು: ಕರ್ನಾಟಕದ ಮಾರ್ನಾಡಿನ ಕಾಂತೂರು ಫ್ರೆಂಡ್ಸ್‌ ತಂಡವು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆದ 16ನೇ ಈಶ ಗ್ರಾಮೋತ್ಸವದ ಮಹಿಳೆಯರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಮೂರ್ನಾಡಿನ (ಮಾರಗೋಡು) ತಂಡವು ಫೈನಲ್‌ ಹಣಾಹಣಿಯಲ್ಲಿ ಕೊಯಂಬತ್ತೂರಿನ ಪಿ.ಜಿ ಪುದೂರ್ ತಂಡವನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಪ್ರಶಸ್ತಿ ಜಯಿಸಿತು.

ಪುರುಷರ ವಾಲಿಬಾಲ್‌ ಪ್ರಶಸ್ತಿಯೂ ಕರ್ನಾಟಕದ ಪಾಲಾಯಿತು. ಫೈನಲ್‌ನ ರೋಚಕ ಹಣಾಹಣಿಯಲ್ಲಿ ಚಿಕ್ಕಮಗಳೂರು ಅಲೀಫ್‌ ಸ್ಟಾರ್‌ ತಂಡವು ಉಡುಪಿಯ ಪಲ್ಲಿ ಫ್ರೆಂಡ್ಸ್‌ ತಂಡವನ್ನು ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿತು. ವಿಜೇತ ತಂಡಗಳು ತಲಾ ₹5 ಲಕ್ಷ ನಗದು ಬಹುಮಾನವನ್ನು ಗೆದ್ದುಕೊಂಡವು. ರನ್ನರ್‌ ಅಪ್‌ ತಂಡವು ₹ 3 ಲಕ್ಷ ಜಯಿಸಿತು.

ADVERTISEMENT

ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಮತ್ತು ವೆಂಕಟೇಶ್ ಪ್ರಸಾದ್ ಅವರು ಈಶ ಗ್ರಾಮೋತ್ಸವದಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದರು.

ಎರಡು ತಿಂಗಳ ಕ್ರೀಡಾಹಬ್ಬ

ಈಶ ಗ್ರಾಮೋತ್ಸವವು ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ರಾಜ್ಯಗಳಾದ್ಯಂತ ನಡೆಯುವ ಎರಡು ತಿಂಗಳ ಕ್ರೀಡಾ ಮಹೋತ್ಸವವಾಗಿದೆ. 162ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಈ ಉತ್ಸವದಲ್ಲಿ 43,000ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು. 10 ಸಾವಿರಕ್ಕೂ ಅಧಿಕ ಗ್ರಾಮೀಣ ಮಹಿಳೆಯರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

2004ಲ್ಲಿ ಸದ್ಗುರು ಜಗ್ಗಿ ವಾಸುದೇವ ಅವರು ಪ್ರಾರಂಭಿಸಿದ ಈಶ ಗ್ರಾಮೋತ್ಸವವು ಗ್ರಾಮೀಣ ಸಮುದಾಯಗಳ ಜೀವನದಲ್ಲಿ ಕ್ರೀಡೆ ಮತ್ತು ಆಟದ ಮನೋಭಾವವನ್ನು ತರುವ ಗುರಿ ಹೊಂದಿದೆ. ಈ ಉತ್ಸವವು ವೃತ್ತಿಪರ ಆಟಗಾರರನ್ನು ಹೊರತುಪಡಿಸಿ ದಿನಗೂಲಿ ಕಾರ್ಮಿಕರು, ಮೀನುಗಾರರು ಮತ್ತು ಗೃಹಿಣಿಯರು ಸೇರಿದಂತೆ ಸಾಮಾನ್ಯ ಗ್ರಾಮೀಣ ಜನರಿಗೆ ತಮ್ಮ ದೈನಂದಿನ ಚಟುವಟಿಕೆಗಳಿಂದ ದೂರ ಸರಿದು, ಕ್ರೀಡೆಯ ಆಚರಣೆ ಮತ್ತು ಒಗ್ಗಟ್ಟಿನ ಶಕ್ತಿಯನ್ನು ಅನುಭವಿಸಲು ವೇದಿಕೆ ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.