ADVERTISEMENT

ನಾಳೆಯಿಂದ ಜೂನಿಯರ್ ಆನ್‌ಲೈನ್ ಶೂಟಿಂಗ್‌

ಪಿಟಿಐ
Published 10 ಜೂನ್ 2021, 13:06 IST
Last Updated 10 ಜೂನ್ 2021, 13:06 IST
ಶಾಹು ಮಾನೆ
ಶಾಹು ಮಾನೆ   

ನವದೆಹಲಿ: ಜೂನಿಯರ್ ವಿಶ್ವ ಚಾಂಪಿಯನ್ ಹೃದಯ್ ಹಜಾರಿಕ ಮತ್ತು ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಶಾಹು ಮಾನೆ ಒಳಗೊಂಡಂತೆ ಭಾರತದ ಪ್ರಮುಖ ಶೂಟರ್‌ಗಳು ಅಂತರರಾಷ್ಟ್ರೀಯ ಆನ್‌ಲೈನ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.

ಇದೇ 12 ಮತ್ತು 13ರಂದು ನಡೆಯಲಿರುವ ಚಾಂಪಿಯನ್‌ಷಿಪ್‌ನ ಮೊದಲ ದಿನ 60 ಶಾಟ್‌ಗಳ ಅರ್ಹತಾ ಸ್ಪರ್ಧೆಗಳು ಮತ್ತು ಎರಡನೇ ದಿನ 24 ಶಾಟ್‌ಗಳ ಫೈನಲ್‌ ಹಂತದ ಸ್ಪರ್ಧೆಗಳು ಇರುತ್ತವೆ. ಎಲ್ಲ ಸ್ಪರ್ಧೆಗಳನ್ನು ಇಂಡಿಯಾಶೂಟಿಂಗ್ ಡಾಟ್ ಕಾಮ್‌ನ ಫೇಸ್ ಬುಕ್ ಪುಟ ಮತ್ತು ಯು ಟ್ಯೂಬ್ ಚಾನಲ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಇದು ಆನ್‌ಲೈನ್ ಚಾಂಪಿಯನ್‌ಷಿಪ್‌ನ ಏಳನೇ ಆವೃತ್ತಿ ಆಗಿದ್ದು ಜೂನಿಯರ್ ಏಷ್ಯನ್ ಚಾಂಪಿಯನ್ ಯಶ್ ವರ್ಧನ್ ಮತ್ತು ಹಾಲಿ ರಾಷ್ಟ್ರೀಯ ಚಾಂಪಿಯನ್ ಜೀನಾ ಖಿಟ್ಟಾ ಕೂಡ ಪಾಲ್ಗೊಳ್ಳಲಿದ್ದಾರೆ. ಶೂಟಿಂಗ್ ಫೆಡರೇಷನ್‌ ಭಾರತದ ಅನೇಕ ಕ್ರೀಡಾಪಟುಗಳಿಗೆ ಅನುಮತಿ ನೀಡಿದೆ ಎಂದು ಸಂಘಟಕ, ಭಾರತದ ಮಾಜಿ ಶೂಟರ್ ಶಿಮಾನ್ ಶರೀಫ್‌ ತಿಳಿಸಿದ್ದಾರೆ.

ADVERTISEMENT

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಅಮೆರಿಕದ ಲೂಕಾಸ್ ಕೊಜೆಂನ್‌ಸ್ಕಿ, ವಿಲಿಯಂ ಶಾನೆರ್‌ ಮತ್ತು ಆಸ್ಟ್ರಿಯಾದ ಮಾರ್ಟಿನ್ ಸ್ಟ್ರೆಂಫಿ ಕೂಡ ಸ್ಪರ್ಧೆಯಲ್ಲಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.