ADVERTISEMENT

ನಿವೃತ್ತಿ ಪ್ರಕಟಿಸಿದ ರನೀಮ್‌

ಏಜೆನ್ಸೀಸ್
Published 25 ಜೂನ್ 2020, 13:57 IST
Last Updated 25 ಜೂನ್ 2020, 13:57 IST
ರನೀಮ್‌ ಅಲ್‌ ವೆಲಿಲಿ
ರನೀಮ್‌ ಅಲ್‌ ವೆಲಿಲಿ   

ಕೈರೊ: ಈಜಿಪ್ಟ್‌ನ ಸ್ಕ್ವಾಷ್‌ ತಾರೆ ರನೀಮ್‌ ಅಲ್‌ ವೆಲಿಲಿ ಅವರು ಗುರುವಾರ ನಿವೃತ್ತಿ ಪ್ರಕಟಿಸಿದ್ದಾರೆ.

31 ವರ್ಷ ವಯಸ್ಸಿನ ರನೀಮ್‌ ಅವರು ಪ್ರಸ್ತುತ ಮಹಿಳೆಯರ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

2015ರ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟಕ್ಕೇರಿದ್ದ ರನೀಮ್‌ ಅವರು 2017ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.

ADVERTISEMENT

2014, 2016 ಮತ್ತು 2019ರಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ಗಳಲ್ಲಿ ಅವರು ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದ್ದರು. ನಾಲ್ಕು ಕಂಚಿನ ಪದಕಗಳನ್ನೂ ಜಯಿಸಿದ್ದಾರೆ.

‘ಹಿಂದಿನ 25 ವರ್ಷಗಳಿಂದಲೂ ಸ್ಕ್ವಾಷ್‌ ಕ್ರೀಡೆ ನನ್ನ ಉಸಿರಿನಲ್ಲಿ ಬೆರೆತು ಹೋಗಿದೆ. ಕ್ರೀಡಾ ಬದುಕಿಗೆ ನಿವೃತ್ತಿ ಪ್ರಕಟಿಸಲು ಇದು ಸೂಕ್ತ ಸಮಯ. ಸಾಕಷ್ಟು ಯೋಚಿಸಿಯೇ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ರನೀಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.