ADVERTISEMENT

ಕೊರೊನಾ ವೈರಸ್‌ ಆತಂಕ– ವಿಮಾ ಕಂಪನಿಗಳಿಗೆ ಭೀತಿ

ರಾಯಿಟರ್ಸ್
Published 28 ಫೆಬ್ರುವರಿ 2020, 19:48 IST
Last Updated 28 ಫೆಬ್ರುವರಿ 2020, 19:48 IST

ಲಂಡನ್‌ : ಕೊರೊನಾ ವೈರಸ್‌ನಿಂದಾಗಿ ಒಂದೊಮ್ಮೆ ಒಲಿಂ ಪಿಕ್ಸ್‌ ಕ್ರೀಡಾಕೂಟ ರದ್ದುಮಾಡುವ ಅನಿವಾರ್ಯತೆ ಎದುರಾದಲ್ಲಿ ಅದರಿಂದ ಕೈಸುಟ್ಟುಕೊಳ್ಳುವವರೆಂದರೆ ಜಾಗತಿಕ ವಿಮಾ ಕಂಪನಿಗಳು. ಜಗತ್ತಿನ ಅತಿ ದೊಡ್ಡ ಕ್ರೀಡಾಕೂಟದ ಮೇಲೆ ಸಾವಿರಾರು ಕೋಟಿ ಡಾಲರ್‌ ವಿಮೆ ಮಾಡಿಸಲಾಗಿದೆ.

ಜಪಾನ್‌ನಲ್ಲಿ 200ಕ್ಕೂ ಹೆಚ್ಚು ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ. ವಿಶ್ವದಾದ್ಯಂತ 80 ಸಾವಿ ರಕ್ಕೂ ಹೆಚ್ಚು ಮಂದಿ ಸೋಂಕುಪೀಡಿತ ರಾಗಿದ್ದಾರೆ. 2,800ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿದ್ದು, ಚೀನಾ ದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ.

ವೈರಸ್‌ ಹಾವಳಿ ತಡೆಯಲು ಜಪಾನ್‌ ಪ್ರಧಾನಿ ಶಿಂಜೊ ಅಬೆ ಹಲವು ಕ್ರೀಡಾಕೂಟಗಳನ್ನು ರದ್ದು ಮಾಡಿದ್ದಾರೆ. ಆದರೆ ಒಲಿಂಪಿಕ್‌ ಕ್ರೀಡಾಕೂಟ ನಡೆಸಲು ಪಣತೊಟ್ಟಿದ್ದಾರೆ. ಜುಲೈ 24ರಂದು ಆರಂಭವಾಗುವ ಈ ಕ್ರೀಡಾಮೇಳಕ್ಕೆ ಜಪಾನ್‌ ಸುಮಾರು ₹ 85,200 ಕೋಟಿ ವೆಚ್ಚ ಮಾಡಿದೆ.

ADVERTISEMENT

ಆದರೆ ಕ್ರೀಡಾಕೂಟ ಮುಂದೂಡುವ, ಸ್ಥಳಾಂತರವಾಗುವ ಅಥವಾ ರದ್ದಾಗುವ ಆತಂಕವನ್ನೂ ತಳ್ಳಿಹಾಕುವಂತಿಲ್ಲ. ಮೇ ತಿಂಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಗತ್ಯ ಬೀಳಬಹುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯ ಡಿಕ್‌ ಪೌಂಡ್‌ ಅವರು ಇತ್ತೀಚೆಗೆ ಹೇಳಿದ್ದರು.

ಯುದ್ಧದಿಂದ ಹಿಡಿದು ಪ್ರಾಕೃತಿಕ ವಿಕೋಪದವರೆಗೆ ಕ್ರೀಡಾಕೂಟಕ್ಕೆ ವಿಮೆಯ ರಕ್ಷಣೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.