ADVERTISEMENT

ಬಾಕ್ಸಿಂಗ್‌: ಸರಿತಾ, ಮನೀಷಾ ಇಂದು ಕಣಕ್ಕೆ

ಪಿಟಿಐ
Published 15 ನವೆಂಬರ್ 2018, 19:45 IST
Last Updated 15 ನವೆಂಬರ್ 2018, 19:45 IST
ಅಭ್ಯಾಸ ನಡೆಸಿದ ಸರಿತಾ ದೇವಿ –ಪಿಟಿಐ ಚಿತ್ರ
ಅಭ್ಯಾಸ ನಡೆಸಿದ ಸರಿತಾ ದೇವಿ –ಪಿಟಿಐ ಚಿತ್ರ   

ನವದೆಹಲಿ: ಭಾರತದ ಎಲ್‌.ಸರಿತಾ ದೇವಿ ಮತ್ತು ಮನೀಷಾ ಮೌನ್‌ ಅವರು ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಕಣಕ್ಕೆ ಇಳಿಯುವರು. ಈ ಮೂಲಕ ಆತಿಥೇಯರು ಚಾಂಪಿಯನ್‌ಷಿಪ್‌ನಲ್ಲಿ ಅಭಿಯಾನ ಆರಂಭಿಸುವರು.

36 ವರ್ಷದ ಸರಿತಾ 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು ಅವರಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. ಎರಡನೇ ಸುತ್ತಿನಲ್ಲಿ ಅವರಿಗೆ ಸ್ವಿಟ್ಜರ್ಲೆಂಡ್‌ನ ಡಯಾನ ಸಾಂಡ್ರಾ ಬ್ರುಗರ್‌ ಎದುರಾಳಿ. 2006ರಲ್ಲಿ ಚಿನ್ನ ಗೆದ್ದಿದ್ದ ಸರಿತಾ ಅವರು ಪೋಲೆಂಡ್‌ನಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯಾ ಓಪನ್ ಮತ್ತು ಸಿಲೆಸಿಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇಲ್ಲಿ ಅವರಿಗೆ ನಾಲ್ಕನೇ ಶ್ರೇಯಾಂಕ ಲಭಿಸಿದೆ.

20 ವರ್ಷದ ಮನೀಷಾ 54ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. 2106ರಲ್ಲಿ ಅವರು ಕಂಚಿನ ಪದಕ ಗಳಿಸಿದ್ದರು. ಮೊದಲ ಬೌಟ್‌ನಲ್ಲಿ ಅವರು ಅಮೆರಿಕದ ಕ್ರಿಸ್ಟಿಯಾನ ಕ್ರೂಜ್ ವಿರುದ್ಧ ಸೆಣಸುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.