ADVERTISEMENT

ಟೇಬಲ್ ಟೆನಿಸ್: ಭಾರತ ತಂಡಕ್ಕೆ ಆರು ವರ್ಷ ಬಳಿಕ ಹೆಡ್‌ ಕೋಚ್‌

ಪಿಟಿಐ
Published 4 ಮಾರ್ಚ್ 2024, 16:41 IST
Last Updated 4 ಮಾರ್ಚ್ 2024, 16:41 IST
 ಮಾಸ್ಸಿಮೊ ಕಾನ್ಸಂಟಿನಿ
 ಮಾಸ್ಸಿಮೊ ಕಾನ್ಸಂಟಿನಿ   

ನವದೆಹಲಿ: ಭಾರತದ ಟೇಬಲ್ ಟೆನಿಸ್ ಆಟಗಾರರು ಆರು ವರ್ಷಗಳ ನಂತರ ಮುಖ್ಯ ತರಬೇತುದಾರರ ಸೇವೆ ಪಡೆಯಲಿದ್ದು, ಇಟಲಿಯ ಮಾಸ್ಸಿಮೊ ಕಾನ್ಸಂಟಿನಿ ಅವರು ಮೂರನೇ ಬಾರಿಗೆ ರಾಷ್ಟ್ರೀಯ ತಂಡದ ಕೋಚ್ ಆಗಿ ಮರಳುವ ಸಾಧ್ಯತೆ ಇದೆ.  

ಮಾಸ್ಸಿಮಾ ಅವರು ಈ ಹಿಂದೆ 2009-2010 ಮತ್ತು 2016-2018ರಲ್ಲಿ ಭಾರತ ತಂಡದೊಂದಿಗೆ ಸೇವೆ ಸಲ್ಲಿಸಿದ್ದರು. 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಐತಿಹಾಸಿಕ ಪ್ರದರ್ಶನದೊಂದಿಗೆ ಟೇಬಲ್ ಟೆನಿಸ್ ಪದಕ ಗೆದ್ದಿತ್ತು.

ಏಷ್ಯನ್ ಗೇಮ್ಸ್‌ನ ಐತಿಹಾಸಿಕ ಪ್ರದರ್ಶನದ ನಂತರ ಕೆಲವು ಕಾರಣಗಳಿಂದಾಗಿ, ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್ಐ)ಗೆ ಕಾನ್ಸಂಟಿನಿ ಅವರ ಉತ್ತರಾಧಿಕಾರಿ ಹುಡುಕಲು ಸಾಧ್ಯವಾಗಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ತಂಡದ ಕೋಚ್‌ ಆಗಿ ಮರಳಲು ಸಿದ್ದರಾಗಿದ್ದಾರೆ.  

ADVERTISEMENT

ಕಾನ್ಸಂಟಿನಿ ಅವರೊಂದಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಪ್ರಸ್ತುತ ನಾಲ್ಕು ವರ್ಷಗಳ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ಟಿಟಿಎಫ್ಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಟಿಟಿಎಫ್ಐ ಇನ್ನೂ ಮೂವರು ವಿದೇಶಿ ತರಬೇತುದಾರರ ಹೆಸರನ್ನು ಸಾಯ್‌ಗೆ ಶಿಫಾರಸು ಮಾಡಿತ್ತು. ಆದರೆ, ಆಟಗಾರರೊಂದಿಗಿನ ಸ್ನೇಹಪರ ಸಂಬಂಧ ಮತ್ತು ಕ್ರೀಡೆ ಬಗ್ಗೆ ಅವರಿಗೆ ಇರುವ ಅಪಾರ ಜ್ಞಾನ ಪರಿಗಣಿಸಿದ್ದು, ಕಾನ್ಸಂಟಿನಿ ಮುಂಚೂಣಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.