ADVERTISEMENT

ಸಮರ್ಥ್‌, ಮರಿಯಾಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 15:39 IST
Last Updated 22 ಸೆಪ್ಟೆಂಬರ್ 2019, 15:39 IST
ಪ್ರಶಸ್ತಿ ಗೆದ್ದವರು (ನಿಂತವರು ಎಡದಿಂದ): ಶ್ರೀಕಾಂತ್‌ ಕಶ್ಯಪ್‌ (ಬಾಲಕರ ಜೂನಿಯರ್‌ ವಿಭಾಗ), ಅನರ್ಘ್ಯ ಮಂಜುನಾಥ (ಬಾಲಕಿಯರ ಜೂನಿಯರ್‌ ವಿಭಾಗ), ಸಮ್ಯಕ್‌ ಕಶ್ಯಪ್‌ ( ಯೂತ್‌ ಬಾಲಕರು), ಖುಷಿ ವಿ. (ಯೂತ್‌ ಬಾಲಕಿಯರು), ಸಮರ್ಥ್‌ ಕುರ್ಡಿಕೇರಿ (ಪುರುಷರು), ಮರಿಯಾ ರೋನಿ (ಮಹಿಳೆಯರು), ವರ್ಚಸ್ವಿ ಮತ್ತು ಕಾವ್ಯಾ (ನಾನ್‌ ಮೆಡಲ್‌ ಡಬಲ್ಸ್). ಕುಳಿತವರು: ಅರ್ನಾವ್‌ ಎನ್‌. (ಮಿನಿ ಕೆಡೆಟ್‌ ಬಾಲಕರು), ಆಯುಷಿ ಬಿ.ಗೋಡ್ಸೆ (ಮಿನಿ ಕೆಡೆಟ್‌ ಬಾಲಕಿಯರು), ಪಾರ್ನವಿ ಎಚ್‌.ಎ. (ಕೆಡೆಟ್‌ ಬಾಲಕಿಯರು), ತೇಶುಭ್‌ ದಿನೇಶ್‌ (ಕೆಡೆಟ್‌ ಬಾಲಕರು), ಆಕಾಶ್‌ ಕೆ.ಜೆ. (ಸಬ್‌ ಜೂನಿಯರ್‌ ಬಾಲಕರು), ಸಹನಾ ಮೂರ್ತಿ (ಸಬ್‌ ಜೂನಿಯರ್‌ ಬಾಲಕರು). ಪ್ರಜಾವಾಣಿ ಚಿತ್ರ

ಬೆಂಗಳೂರು: ಅದ್ಭುತ ಆಟವಾಡಿದ ಸಮರ್ಥ್‌ ಕುರ್ಡಿಕೇರಿ ಹಾಗೂ ಮರಿಯಾ ರೋನಿ ಇಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಸಮರ್ಥ್‌ ಅವರು ಎಮ್‌. ಕಳೈವನನ್‌ ಅವರನ್ನು 11–3, 11–9, 6–11, 11–7, 11–9ರಿಂದ ಸೋಲಿಸಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ಮರಿಯಾ ರೋನಿ, ಯಶಸ್ವಿನಿ ಘೋರ್ಪಡೆ ವಿರುದ್ಧ 11–7, 11–5, 11–9, 9–11, 11–8ರಿಂದ ಗೆದ್ದರು.

ADVERTISEMENT

ಬಾಲಕರ ಕೆಡೆಟ್‌ ವಿಭಾಗದ ಪ್ರಶಸ್ತಿಯು ತೇಶುಭ್‌ ದಿನೇಶ್‌ ಪಾಲಾಯಿತು. ಅಂತಿಮ ಹಣಾಹಣಿಯಲ್ಲಿ ಅವರು ಸಿದ್ಧಾಂತ್‌ ವಾಸನ್‌ ಅವರನ್ನು 11–9, 13–11, 11–8ರಿಂದ ಮಣಿಸಿದರು. ಬಾಲಕಿಯರ ಕೆಡೆಟ್‌ ವಿಭಾಗದಲ್ಲಿ ಪರ್ನವಿ ಎಚ್‌.ಎ. ಅವರು ಸಾನ್ವಿ ವಿಶಾಲ್‌ ಮಂಡೇಕರ್‌ ವಿರುದ್ಧ 11–9, 14–12, 9–11, 11–4ರಿಂದ ಗೆದ್ದು ಪ್ರಶಸ್ತಿ ಜಯಿಸಿದರು.

ಬಾಲಕರ ಮಿನಿ ಕೆಡೆಟ್‌ ವಿಭಾಗದಲ್ಲಿ ಅರ್ನಾವ್‌ ಎನ್‌. ಪ್ರಶಸ್ತಿ ಜಯಿಸಿದರು. ಫೈನಲ್‌ ಪಂದ್ಯದಲ್ಲಿ ಅವರು ಅಥರ್ವ್‌ ನವರಂಗೆಯನ್ನು 11–6, 11–2, 13–11ರಿಂದ ಸೋಲಿಸಿದರು. ಈ ವಿಭಾಗದ ಬಾಲಕಿಯರ ಪ್ರಶಸ್ತಿ ಆಯುಷಿ ಬಾಲಕೃಷ್ಣ ಗೋಡ್ಸೆ ಪಾಲಾಯಿತು. ಅಂತಿಮ ಪಂದ್ಯದಲ್ಲಿ ಅವರು ಕೈರಾ ಬಾಳಿಗ ವಿರುದ್ಧ 11–3, 11–3, 11–9ರಿಂದ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.