
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ಯಶಸ್ವಿನಿ ಘೋರ್ಪಡೆ ಅವರು ಚೀನಾದ ಚೆಂಗ್ಡು ನಗರದಲ್ಲಿ ನಡೆಯಲಿರುವ ಐಟಿಟಿಎಫ್ ಮಿಶ್ರ ತಂಡ ಟೇಬಲ್ ಟೆನಿಸ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಈ ಟೂರ್ನಿಯು ನವೆಂಬರ್ 30ರಿಂದ ಡಿಸೆಂಬರ್ 7ರ ವರೆಗೆ ನಡೆಯಲಿದೆ.
20 ವರ್ಷ ವಯಸ್ಸಿನ ಯಶಸ್ವಿನಿ ಅವರು ದೆಹಲಿಯಲ್ಲಿ ಈಚೆಗೆ ನಡೆದ ರಾಷ್ಟ್ರೀಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ್ದರು.
ತಂಡ ಹೀಗಿದೆ: ಪುರುಷರು: ಮಾನವ್ ಠಕ್ಕರ್, ಮಾನುಷ್ ಶಾ, ಜ್ಞಾನಶೇಖರನ್ ಸತ್ಯನ್ ಹಾಗೂ ಪಾಯಸ್ ಜೈನ್.
ಮಹಿಳೆಯರು: ಮನಿಕಾ ಬತ್ರಾ, ದಿಯಾ ಚಿತಳೆ, ಯಶಸ್ವಿನಿ ಘೋರ್ಪಡೆ ಹಾಗೂ ಸ್ವಸ್ತಿಕಾ ಘೋಷ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.