ADVERTISEMENT

ಉದಯವೀರ್‌ಗೆ ಎರಡು ಚಿನ್ನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 20:10 IST
Last Updated 13 ಜುಲೈ 2019, 20:10 IST

ನವದೆಹಲಿ: ಭಾರತದ ಉದಯವೀರ್ ಸಿಧು, ಜರ್ಮನಿಯ ಸುಹ್ಲ್‌ನಲ್ಲಿ ಜೂನಿಯರ್‌ ಶೂಟರ್‌ಗಳಿಗಾಗಿ ನಡೆ ಯುತ್ತಿರುವ ವಿಶ್ವಕಪ್‌ನ ಆರಂಭದ ದಿನವಾದ ಶನಿವಾರ ಎರಡು ಚಿನ್ನದ ಪದಕ ಗೆದ್ದುಕೊಂಡರು. ಭಾರತ ಒಟ್ಟು ಐದು ಪದಕಗಳೊಂದಿಗೆ ದಿನದ ಗೌರವ ಪಡೆಯಿತು.

ಜೂನಿಯರ್‌ ಪುರುಷರ 25 ಮೀ ಸ್ಟ್ಯಾಂಡರ್ಡ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳು ‘ಕ್ಲೀನ್ ಸ್ವೀಪ್‌’ ಮಾಡಿದರು. ಉದಯವೀರ್‌ 575 ಪಾಯಿಂಟ್‌ ಸಂಗ್ರಹಿಸಿದರು. ಆದರ್ಶ್‌ ಸಿಂಗ್‌ (568) ಮತ್ತು ಆನಿಶ್‌ ಭಾನವಾಲಾ (566) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಉದಯವೀರ್‌ ನಂತರ ಆದರ್ಶ್‌ ಮತ್ತು ಅವಳಿ ಸೋದರ ವಿಜಯವೀರ್‌ ಸಿಧು ಜೊತೆಗೂಡಿ ತಂಡ ವಿಭಾಗದಲ್ಲೂ 1707 ಪಾಯಿಂಟ್‌ ಗಳಿಸಿ ಚಿನ್ನ ಗೆದ್ದು ಕೊಂಡರು. ಜೂನಿಯರ್‌ ವಿಭಾಗದಲ್ಲಿ ಇಷ್ಟೊಂದು ಪಾಯಿಂಟ್‌ ಸಂಗ್ರಹಿಸಿದ್ದು ದಾಖಲೆ ಎನಿಸಿತು. ಅನಿಶ್‌, ರಾಜಕನ್ವರ್‌ ಸಂಧು ಮತ್ತು ದಿಲ್‌ಶಾನ್‌ ಕೆಲ್ಲಿ ಅವರ ತಂಡ ಎರಡನೇ ಸ್ಥಾನ (1606) ಪಡೆಯಿತು.

ADVERTISEMENT

ಭಾರತ ಮೊದಲ ದಿನ– ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿ ಒಟ್ಟು ಐದು ಪದಕ ಗಳೊಂದಿಗೆ ಅಗ್ರಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.