ADVERTISEMENT

ಉನ್ನತಿ ಹೂಡಾಗೆ ಪ್ರಶಸ್ತಿ ‘ಡಬಲ್‌’

ರಾಷ್ಟ್ರೀಯ ಸಬ್ ಜೂನಿಯರ್ ಬ್ಯಾಡ್ಮಿಂಟನ್‌: ಅನ್ಷ್‌ ನೇಗಿಗೆ ಸಿಂಗಲ್ಸ್‌ ಕಿರೀಟ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 18:51 IST
Last Updated 7 ಜುಲೈ 2019, 18:51 IST
13 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು.(ಎಡದಿಂದ) ಸಿದ್ಧಾರ್ಥ್‌ ರಾವತ್, ಅನ್ಷ್‌ ನೇಗಿ, ವಂಶ್‌ ಪ್ರತಾಪ್ ಸಿಂಗ್, ಕೌಸ್ತುಬ್ ತ್ಯಾಗಿ, ಭವ್ಯ ಛಾಬ್ರಾ, ಉನ್ನತಿ ಹೂಡಾ, ದಿವಿತಾ ಪಟ್ಟಸಿರಿ. ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
13 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು.(ಎಡದಿಂದ) ಸಿದ್ಧಾರ್ಥ್‌ ರಾವತ್, ಅನ್ಷ್‌ ನೇಗಿ, ವಂಶ್‌ ಪ್ರತಾಪ್ ಸಿಂಗ್, ಕೌಸ್ತುಬ್ ತ್ಯಾಗಿ, ಭವ್ಯ ಛಾಬ್ರಾ, ಉನ್ನತಿ ಹೂಡಾ, ದಿವಿತಾ ಪಟ್ಟಸಿರಿ. ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಉಡುಪಿ: ಎರಡನೇ ಶ್ರೇಯಾಂಕದ ಉನ್ನತಿ ಹೂಡಾ ಭಾನುವಾರ ಇಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಸಬ್ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್‌ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಡಬಲ್‌ ಸಾಧನೆ ಮಾಡಿದರು. ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಅಗ್ರಶ್ರೇಯಾಂಕಿತ ಆಟಗಾರ ಅನ್ಷ್‌ ನೇಗಿ ಚಾಂಪಿಯನ್‌ ಆಗಿದ್ದಾರೆ.

ಭಾನುವಾರ ಇಲ್ಲಿನ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಉನ್ನತಿ 21-18, 21-12ರ ನೇರ ಸೆಟ್‌ಗಳಿಂದ ಅಗ್ರಶ್ರೇಯಾಂಕಿತ ಆಟಗಾರ್ತಿ, ಆಂಧ್ರಪ್ರದೇಶದ ನವ್ಯಾ ಖಂಡೇರಿ ವಿರುದ್ಧ ಜಯಿಸಿದರು.

ಬಾಲಕಿಯರ ಡಬಲ್ಸ್ ಫೈನಲ್‌ನಲ್ಲಿ ಉನ್ನತಿ ಹೂಡಾ ಹಾಗೂ ಆಂಧ್ರ ಪ್ರದೇಶದ ದಿವಿತಾ ಪೊಟ್ಟರಸಿ ಜೋಡಿ 21-19, 21-19 ರ ನೇರ ಸೆಟ್‌ಗಳಲ್ಲಿ ಆಂಧ್ರಪ್ರದೇಶದ ನವ್ಯಾ ಕಂಡೇರಿ ಹಾಗೂ ಶ್ರೀಯಾಂಶಿ ವಾಲಿಶೆಟ್ಟಿ ಜೋಡಿಯನ್ನು ಮಣಿಸಿ ಪ್ರಶಸ್ತಿ ಗಳಿಸಿತು.

ADVERTISEMENT

ಬಾಲಕರ ಫೈನಲ್‌ನಲ್ಲಿ ಉತ್ತರಾಖಂಡದ ಅನ್ಷ್‌ ನೇಗಿ 21-15 21-13ರಲ್ಲಿ ನೇರ ಸೆಟ್‌ಗಳಿಂದ ತೆಲಂಗಾಣದ ಎನ್. ಪ್ರಣವ್‌ ರಾಮ್‌ ಅವರನ್ನು ಸೋಲಿಸಿದರು.

ಬಾಲಕರ ಡಬಲ್ಸ್‌ ಫೈನಲ್‌ನಲ್ಲಿ ಉತ್ತರಾಖಂಡದ ವಂಶ್‌ ಪ್ರತಾಪ್ ಸಿಂಗ್ ಕರ್ಕಿ ಹಾಗೂ ಕೌಸ್ತುಭ್ ತ್ಯಾಗಿ ಜೋಡಿ 21-19, 14-21, 21-11ರಲ್ಲಿ ಉತ್ತರಾಖಂಡದ ಅನ್ಷ್‌ ನೇಗಿ ಹಾಗೂ ಸಿದ್ಧಾರ್ಥ್‌ ರಾವತ್ ಜೋಡಿಯನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.