ADVERTISEMENT

50 ಕಿ.ಮೀ ವಿಭಾಗ; ಹೇಡನ್‌ಗೆ ಪ್ರಥಮ ಸ್ಥಾನ

ಕಾಫಿಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್‍ ಶುರು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 18:20 IST
Last Updated 13 ಅಕ್ಟೋಬರ್ 2018, 18:20 IST
ಮ್ಯಾರಥಾನ್‍ನ 50 ಕಿ.ಮೀ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ತಮಿಳುನಾಡಿ ರಾಜಶೇಖರ್ ರಾಜೇಂದ್ರನ್‌ ಅವರಿಗೆ ಆಯೋಜಕರು ಪದಕ ನೀಡಿ ಅಭಿನಂದಿಸಿದರು.
ಮ್ಯಾರಥಾನ್‍ನ 50 ಕಿ.ಮೀ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ತಮಿಳುನಾಡಿ ರಾಜಶೇಖರ್ ರಾಜೇಂದ್ರನ್‌ ಅವರಿಗೆ ಆಯೋಜಕರು ಪದಕ ನೀಡಿ ಅಭಿನಂದಿಸಿದರು.   

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಫಿಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್‍ ಶನಿವಾರ ಶುರುವಾಗಿದ್ದು, 50 ಕಿಲೋ ಮೀಟರ್ ವಿಭಾಗದಲ್ಲಿ ಅಮೆರಿಕದ ಹೇಡನ್‌ ಹಾಕ್ಸ್‌ ಪ್ರಥಮ ಸ್ಥಾನ ಪಡೆದರು.

ಹೇಡನ್‌ ಅವರು 4 ಗಂಟೆ 19 ನಿಮಿಷದಲ್ಲಿ 50 ಕಿ.ಮೀ ಕ್ರಮಿಸಿ ಪದಕವನ್ನು ಪಡೆದರು.

ಭಾರತದ ರಾಜಶೇಖರ್ ರಾಜೇಂದ್ರನ್‌ ಅವರು 4 ಗಂಟೆ 38 ನಿಮಿಷದಲ್ಲಿ ಕ್ರಮಿಸಿ ಎರಡನೇ ಸ್ಥಾನ ಮತ್ತು ಸಂದೀಪ್‌ಕುಮಾರ್‌ ಅವರು 4 ಗಂಟೆ 47 ನಿಮಿಷದಲ್ಲಿ ಕ್ರಮಿಸಿ ಮೂರನೇ ಸ್ಥಾನ ಪಡೆದರು.

ADVERTISEMENT

ಈ ಮ್ಯಾರಥಾನ್‍ನಲ್ಲಿ 50 ಕಿ.ಮೀ, 80 ಕಿ.ಮೀ ಹಾಗೂ 110 ಕಿ.ಮೀ ಮೂರು ವಿಭಾಗಗಳಿದ್ದು, ದೇಶವಿದೇಶಗಳ 811 ಓಟಗಾರರು ಪಾಲ್ಗೊಂಡಿದ್ದಾರೆ. ಈ ಪೈಕಿ 143 ಮಹಿಳಾ ಓಟಗಾರರು ಇದ್ದಾರೆ.

ದೇಶದ 22 ರಾಜ್ಯಗಳು, 13 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಬ್ರಿಟನ್‌, ಪೊಲೆಂಡ್‌, ಫ್ರಾನ್ಸ್, ಅಮೆರಿಕ, ಮಾಲ್ಡೀವ್ಸ್, ಜರ್ಮನಿ, ಆಸ್ಟ್ರೇಲಿಯ, ಕೆನಡಾ, ಬೆಲ್ಜಿಯಂ, ಸಿಂಗಪುರ, ಜಪಾನ್, ಮಲೇಷ್ಯಾದ 43 ಓಟಗಾರರು ಇದ್ದಾರೆ.

ಕೆಮ್ಮಣ್ಣುಗುಂಡಿ ಸಮೀಪದ ಲಾಲ್‌ಬಾಗ್‌–ಸಂಪಿಗೆಹಟ್ಟಿ– ಕುರುಕನಮಟ್ಟಿ– ಧೂಪದಖಾನ್‌– ರಾಜಗಿರಿ ತೋಟ ಮಾರ್ಗ ನಿಗದಿಪಡಿಸಲಾಗಿದೆ. ಕಾಫಿಕಣಿವೆಯ ತೋಟಗಳ ತೊರೆಝರಿದಂಡೆ, ಗುಡ್ಡ, ಇಳಿಜಾರು, ಸರ್ಪಸುತ್ತಿನ ತಿರುವುಗಳಲ್ಲಿ ಸ್ಪರ್ಧಿಗಳು ಓಟ ಚಮತ್ಕಾರ ಪ್ರದರ್ಶನದಲ್ಲಿ ತೊಡಗಿದ್ದಾರೆ. 14ರಂದು ಬೆಳಿಗ್ಗೆವರೆಗೆ ಮ್ಯಾರಥಾನ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.