ಮುಂಬೈ: ಚೆನ್ನೈನಲ್ಲಿ ಆ.22ರಿಂದ ಸೆ.7ರವರೆಗೆ ನಡೆಯುವ ಅಲ್ಟಿಮೇಟ್ ಟೇಬಲ್ ಟೆನಿಸ್ (ಯುಟಿಟಿ) 5ನೇ ಆವೃತ್ತಿಗಾಗಿ ಎಂಟು ಫ್ರಾಂಚೈಸಿಗಳು 16 ವಿದೇಶಿಯರನ್ನು ಒಳಗೊಂಡಂತೆ ಒಟ್ಟು 48 ಆಟಗಾರರನ್ನು ಆಯ್ಕೆ ಮಾಡಿಕೊಂಡವು.
ಈಚೆಗೆ ಯುಟಿಟಿ ಕಂಟೆಂಡರ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತದ ಆಟಗಾರ್ತಿ ಶ್ರೀಜಾ ಅಕುಲಾ ಅವರು ಜೈಪುರ ಪೇಟ್ರಿಯಾಟ್ಸ್ ತಂಡದ ಪಾಲಾಗಿದ್ದರೆ. 25 ವರ್ಷ ವಯಸ್ಸಿನ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 25ನೇ ಸ್ಥಾನದಲ್ಲಿದ್ದಾರೆ.
ಹಾಲಿ ಚಾಂಪಿಯನ್ ಗೋವಾ ಚಾಲೆಂಜರ್ಸ್ ತಂಡವು ಭಾರತದ ಟಿಟಿ ತಾರೆ ಹರ್ಮೀತ್ ದೇಸಾಯಿ ಅವರನ್ನು ಉಳಿಸಿಕೊಂಡರೆ, ಬೆಂಗಳೂರು ಸ್ಮಾಷರ್ಸ್ ತಂಡವು ಮಣಿಕಾ ಬಾತ್ರಾ ಅವರಬ್ಬಯ ತಂಡದಲ್ಲಿ ಮುಂದುವರಿಸಿದೆ.
ಎಂಟು ತಂಡಗಳು ತಮ್ಮ ರೋಸ್ಟರ್‌ನಲ್ಲಿ ತಲಾ ಆರು ಆಟಗಾರರನ್ನು ಹೊಂದಿದ್ದಾರೆ. ಅದರಲ್ಲಿ ಇಬ್ಬರು ವಿದೇಶಿ ಆಟಗಾರರು ಸೇರಿದ್ದಾರೆ. ಈ ಹಿಂದಿನ ಆವೃತ್ತಿಗಳಲ್ಲಿ ಆರು ತಂಡಗಳು ಸ್ಪರ್ಧಾಕಣದಲ್ಲಿದ್ದವು. ಈ ಬಾರಿ ಜೈಪುರ ಪೇಟ್ರಿಯಾಟ್ಸ್ ಮತ್ತು ಅಹಮದಾಬಾದ್ ಸೂಪರ್ ಜೈಂಟ್ಸ್ ಪೈಪರ್ಸ್ ತಂಡಗಳು ಹೊಸ ಸೇರ್ಪಡೆಯಾಗಿವೆ.
‘ವಿಶ್ವದ ಅತ್ಯುತ್ತಮ ಆಟಗಾರರು ಈಗ ಯುಟಿಟಿ ಟೂರ್ನಿಯಲ್ಲಿ ಆಡಲು ಬಯಸುತ್ತಾರೆ. ಅದಕ್ಕೆ ಇಂದಿನ ಆಟಗಾರರ ಡ್ರಾಫ್ಟ್ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಎಂಟು ತಂಡಗಳು ಸ್ಪರ್ಧಿಸಲಿದ್ದು, ಹೀಗಾಗಿ ನಿರೀಕ್ಷೆಯೂ ಅಧಿಕವಾಗಿದೆ’ ಎಂದು ಯುಟಿಟಿ ಪ್ರವರ್ತಕರಾದ ವೀಟಾ ದಾನಿ ಮತ್ತು ನಿರಾಜ್ ಬಜಾಜ್ ಹೇಳಿದ್ದಾರೆ.
ತಂಡಗಳು;ಆಟಗಾರರು
ಪಿಬಿಜಿ ಬೆಂಗಳೂರು ಸ್ಮಾಷರ್ಸ್: ಮಣಿಕಾ ಬಾತ್ರಾ, ಅಲ್ವಾರೊ ರೋಬಲ್ಸ್ (ಸ್ಪೇನ್), ಲಿಲಿ ಜಾಂಗ್ (ಅಮೆರಿಕ), ಜೀತ್ ಚಂದ್ರ, ತನೀಶಾ ಕೊಟೆಚಾ, ಅಮಲ್ರಾಜ್ ಆ್ಯಂಟನಿ
ಅಹಮದಾಬಾದ್ ಎಸ್‌ಜಿ ಪೈಪರ್ಸ್; ಮನುಷ್ ಶಾ, ಬರ್ನಾಡೆಟ್ ಸ್ಜೋಕ್ಸ್ (ರೊಮೇನಿಯಾ), ಲಿಲಿಯನ್ ಬಾರ್ಡೆಟ್ (ಫ್ರಾನ್ಸ್), ರೀತ್ ಟೆನ್ನಿಸನ್, ಪ್ರೀತಾ ವರ್ತಿಕರ್, ಜಶ್ ಮೋದಿ
ಚೆನ್ನೈ ಲಯನ್ಸ್; ಅಚಂತಾ ಶರತ್ ಕಮಲ್, ಸಕುರಾ ಮೋರಿ (ಜಪಾನ್), ಜೂಲ್ಸ್ ರೊಲ್ಯಾಂಡ್ (ಫ್ರಾನ್ಸ್), ಪೊಯ್ಮಂಟಿ ಬೈಸ್ಯಾ, ಮೌಮಾ ದಾಸ್, ಅಭಿನಂದ್ ಪಿಬಿ
ದಬಾಂಗ್ ಡೆಲ್ಲಿ ಟಿಟಿಸಿ; ಸತ್ಯನ್ ಜಿ, ಒರವಾನ್ ಪರನಾಂಗ್ (ಥಾಯ್ಲೆಂಡ್), ದಿಯಾ ಚಿತಾಲೆ, ಆ್ಯಂಡ್ರಿಯಾಸ್ ಲೆವೆಂಕೊ (ಆಸ್ಟ್ರಿಯಾ), ಯಶನ್ಶ್ ಮಲಿಕ್, ಲಕ್ಷಿತಾ ನಾರಂಗ್
ಗೋವಾ ಚಾಲೆಂಜರ್ಸ್; ಹರ್ಮೀತ್ ದೇಸಾಯಿ, ಯಾಂಗ್ಜಿ ಲಿಯು (ಆಸ್ಟ್ರೇಲಿಯಾ), ಯಶಸ್ವಿನಿ ಘೋರ್ಪಡೆ, ಸುಧಾಂಶು ಗ್ರೋವರ್, ಸಯಾಲಿ ವಾನಿ, ಮಿಹೈ ಬೊಬೊಸಿಕಾ (ಇಟಲಿ)
ಜೈಪುರ ಪೇಟ್ರಿಯಾಟ್ಸ್; ಶ್ರೀಜಾ ಅಕುಲಾ, ಚೋ ಸೆಯುಂಗ್ಮಿನ್ (ದಕ್ಷಿಣ ಕೊರಿಯಾ), ಸುಥಾಸಿನಿ ಸಾವೆಟ್ಟಾಬುಟ್ (ಥಾಯ್ಲೆಂಡ್), ಸ್ನೇಹಿತ್ ಎಸ್.ಎಫ್.ಆರ್, ರೋಣಿತ್ ಭಂಜಾ, ಮೌಮಿತಾ ದತ್ತಾ
ಪುಣೇರಿ ಪಲ್ಟನ್ ಟೇಬಲ್ ಟೆನಿಸ್; ಐಹಿಕಾ ಮುಖರ್ಜಿ, ನೀನಾ ಮಿಟ್ಟೆಲ್‌ಹ್ಯಾಮ್ (ಜರ್ಮನಿ), ಜೊವೊ ಮೊಂಟೆರೊ (ಪೋರ್ಚುಗಲ್), ಅಂಕುರ್ ಭಟ್ಟಾಚಾರ್ಜಿ, ಅನಿರ್ಬನ್ ಘೋಷ್, ಯಾಶಿನಿ ಶಿವಶಂಕರ್
ಯು ಮುಂಬಾ ಟಿಟಿ; ಮಾನವ್ ಠಕ್ಕರ್, ಸುತೀರ್ಥ ಮುಖರ್ಜಿ, ಅರುಣಾ ಕ್ವಾದ್ರಿ (ನೈಜೀರಿಯಾ), ಆಕಾಶ್ ಪಾಲ್, ಕಾವ್ಯಶ್ರೀ ಬಾಸ್ಕರ್, ಮರಿಯಾ ಕ್ಸಿಯಾವೊ (ಸ್ಪೇನ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.