ADVERTISEMENT

ಅಲ್ಟಿಮೇಟ್‌ ಟೇಬಲ್‌ ಟೆನಿಸ್‌ ಟೂರ್ನಿ ಮುಂದಿನ ವರ್ಷಕ್ಕೆ ಮುಂದೂಡಿಕೆ

ಪಿಟಿಐ
Published 16 ಅಕ್ಟೋಬರ್ 2020, 12:47 IST
Last Updated 16 ಅಕ್ಟೋಬರ್ 2020, 12:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಭಾರತದಲ್ಲಿ ನಡೆಯಬೇಕಿರುವ ನಾಲ್ಕನೇ ಆವೃತ್ತಿಯ ಅಲ್ಟಿಮೇಟ್‌ ಟೇಬಲ್‌ ಟೆನಿಸ್ (ಯುಟಿಟಿ) ಲೀಗ್‌ ಅನ್ನು ಕೊರೊನಾ ವೈರಸ್‌ ಹಾವಳಿಯ ಹಿನ್ನೆಲೆಯಲ್ಲಿ 2021ಕ್ಕೆ ಮುಂದೂಡಲಾಗಿದೆ.

ಈ ಮೊದಲು ಲೀಗ್‌ ಅನ್ನು ಈ ವರ್ಷದ ಆಗಸ್ಟ್‌ 14ರಿಂದ 31ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಬಳಿಕ ಕೋವಿಡ್‌ ಕಾರಣದಿಂದ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು.

‘ಆಟಗಾರರು ಹಾಗೂ ಲೀಗ್‌ನಲ್ಲಿ ಪಾಲ್ಗೊಳ್ಳುವ ಇತರ ಸಿಬ್ಬಂದಿಯ ಆರೋಗ್ಯ ಹಾಗೂ ಸುರಕ್ಷತೆ ನಮಗೆ ಮುಖ್ಯ. ಟೋಕಿಯೊ ಒಲಿಂಪಿಕ್ಸ್‌ಗೆ ಸಜ್ಜುಗೊಳ್ಳುವ ಹೊತ್ತಿನಲ್ಲಿ ಅಪಾಯ ಮೈಮೇಲೆದುಕೊಳ್ಳಲು ಬಯಸುವುದಿಲ್ಲ. ಅಂತರರಾಷ್ಟ್ರೀಯ ಪ್ರವಾಸ ನಿರ್ಬಂಧಗಳ ತೆರವು ಕುರಿತು ಇನ್ನೂ ಸ್ಪಷ್ಟತೆಯಿಲ್ಲ. ಹೀಗಾಗಿ ಪರಿಸ್ಥಿತಿಯನ್ನು ಅವಲೋಕಿಸಿ, ಭಾರತ ಟೇಬಲ್‌ ಟೆನಿಸ್‌ ಫೆಡರೇಷನ್‌ನೊಂದಿಗೆ ಚರ್ಚಿಸಿ, ಲೀಗ್‌ ಮುಂದೂಡಲು ತೀರ್ಮಾನಿಸಿದ್ದೇವೆ‘ ಎಂದು ಯುಟಿಟಿಯ ಸಹ ಸಂಘಟಕರಾದ ವೀಟಾ ದಾನಿ ಹಾಗೂ ನೀರಜ್‌ ಬಜಾಜ್‌ ಜಂಟಿ ಹೇಳಿಕೆ ನೀಡಿದ್ದಾರೆ.

ADVERTISEMENT

‘ಮುಂದಿನ ವರ್ಷ ನಡೆಸಲು ಉದ್ದೇಶಿಸಿರುವ ಟೂರ್ನಿಯ ವೇಳಾಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸುತ್ತೇವೆ‘ ಎಂದೂ ಅವರು ತಿಳಿಸಿದ್ದಾರೆ.

2017ರಲ್ಲಿ ಆರಂಭವಾದ ಯುಟಿಟಿ ಲೀಗ್‌ ಹಲವು ಅಥ್ಲೀಟ್‌ಗಳ ಉದಯಕ್ಕೆ ವೇದಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.