ADVERTISEMENT

ಆರ್ಚರಿ: ಭಾರತ ಪುರುಷರ ತಂಡಕ್ಕೆ ಚಿನ್ನ

​ಪ್ರಜಾವಾಣಿ ವಾರ್ತೆ
Published 21 ಮೇ 2022, 15:44 IST
Last Updated 21 ಮೇ 2022, 15:44 IST
ವಿಶ್ವಕಪ್ ಆರ್ಚರಿಯಲ್ಲಿ ಚಿನ್ನ ಗೆದ್ದ ಭಾರತ ತಂಡದ ಅಭಿಷೇಕ್ ವರ್ಮನ್, ರಜತ್ ಚೌಹಾಣ ಮತ್ತು ಅಮನ್ ಸೈನಿ  – ಸಾಯ್ ಟ್ವಿಟರ್ ಚಿತ್ರ  
ವಿಶ್ವಕಪ್ ಆರ್ಚರಿಯಲ್ಲಿ ಚಿನ್ನ ಗೆದ್ದ ಭಾರತ ತಂಡದ ಅಭಿಷೇಕ್ ವರ್ಮನ್, ರಜತ್ ಚೌಹಾಣ ಮತ್ತು ಅಮನ್ ಸೈನಿ  – ಸಾಯ್ ಟ್ವಿಟರ್ ಚಿತ್ರ     

ಗ್ವಾಂಗ್ಜು, ದಕ್ಷಿಣ ಕೊರಿಯಾ (ಪಿಟಿಐ): ಭಾರತ ಪುರುಷರ ಕಂಪೌಂಡ್ ಆರ್ಚರಿ ತಂಡವು ಶನಿವಾರ ವಿಶ್ವಕಪ್ ಸ್ಟೇಜ್‌ಗಳಲ್ಲಿ ಸತತ ಎರಡನೇ ಚಿನ್ನದ ಪದಕ ಜಯಿಸಿತು.

ವೈಯಕ್ತಿಕ ವಿಭಾಗದಲ್ಲಿ ವಿಶ್ವ ಚಾಂಪಿಯನ್ ನಿಕೊ ವೀನರ್ ವಿರುದ್ಧ ಸೆಣಸಿದ ಮೋಹನ್ ಭಾರದ್ವಾಜ್ ಬೆಳ್ಳಿ ಪದಕ ಪಡೆದರು. ಮಹಿಳೆಯರ ತಂಡ ವಿಭಾಗದಲ್ಲಿ ಭಾರತವು ಕಂಚಿನ ಪದಕ ಪಡೆದರು.

ಸ್ಟೇಜ್ ಟು ವಿಶ್ವಕಪ್‌ನಲ್ಲಿ ಭಾರತ ತಂಡವು ಐದು ಪದಕಗಳೊಂದಿಗೆ ತನ್ನ ಅಭಿಯಾನ ಮುಗಿಸಿತು. ಅದರಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿವೆ.

ADVERTISEMENT

ಟಾಪ್ಸ್‌ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ) ಪ್ರೋತ್ಸಾಹ ಪಡೆದಿರುವ ಭರವಸೆಯ ಆರ್ಚರ್‌ಗಳು ಈ ಸಾಧನೆ ಮಾಡಿದರು. ಅಭಿಷೇಕ್ ವರ್ಮನ್, ರಜತ್ ಚೌಹಾಣ ಮತ್ತು ಅಮನ್ ಸೈನಿ ಅವರಿದ್ದ ಪುರುಷರ ತಂಡವು ಫ್ರಾನ್ಸ್ ಎದುರು ಜಯ ಸಾಧಿಸಿ ಚಿನ್ನ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.