ADVERTISEMENT

ಚೆಸ್‌: ಅಗ್ರಸ್ಥಾನದಲ್ಲಿ ಈಶ್ವರ್, ಅದ್ವೈತ್

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:11 IST
Last Updated 23 ಮೇ 2025, 16:11 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಉಡುಪಿ: ಮೈಸೂರಿನ ಈಶ್ವರ್ ಅಯ್ಯಪ್ಪನ್, ದಕ್ಷಿಣ ಕನ್ನಡದ ಅದ್ವೈತ್ ಮತ್ತು ಬೆಂಗಳೂರಿನ ವಿಹಾನ್ ಸಚ್‌ದೇವ್‌ ಅವರು ಉಡುಪಿ ಜಿಲ್ಲೆ ಪಡುಬಿದ್ರಿಯ ಕಾಪುವಿನಲ್ಲಿ ಶುಕ್ರವಾರ ಆರಂಭಗೊಂಡ 15 ವರ್ಷದೊಳಗಿನವರ ರಾಜ್ಯ ಫಿಡೆ ರೇಟೆಡ್ ಮುಕ್ತ ಚೆಸ್ ಚಾಂಪಿಯನ್‌ಷಿಪ್‌ನ ಮೂರು ಸುತ್ತುಗಳ ಮುಕ್ತಾಯಕ್ಕೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. 

ಅಖಿಲ ಭಾರತ ಚೆಸ್ ಫೆಡರೇಷನ್‌, ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಮತ್ತು ಉಡುಪಿ ಜಿಲ್ಲಾ ಚೆಸ್ ಸಂಸ್ಥೆಯ ಸಹಯೋಗದಲ್ಲಿ ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನಲ್ಲಿ ಮೂವರೂ ತಲಾ 3 ಪಾಯಿಂಟ್ ಗಳಿಸಿದ್ದಾರೆ. 15 ವರ್ಷದೊಳಗಿನ ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಬೆಂಗಳೂರಿನ ಮಾಯಾ ಅಮೀನ್‌, ದಕ್ಷಿಣ ಕನ್ನಡದ ಆರುಷಿ ಸೆವೆರಿನ್‌ ಹೆಲೆನ್ ಡಿಸಿಲ್ವಾ ಮತ್ತು ಬೆಂಗಳೂರಿನ ಧನುಷ್ಕಾ ತಲಾ 3 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಗಳನ್ನು ಹಂಚಿಕೊಂಡರು.

ಮುಕ್ತ ವಿಭಾಗದಲ್ಲಿ ಋಷಿಕೇಶ್ ಗಣಪತಿ ಸುಬ್ರಹ್ಮಣ್ಯನ್, ರಜಸ್ ದಹಳೆ, ವಿಹಾನ್ ಶೆಟ್ಟಿ ಮತ್ತು ಇತರ 12 ಮಂದಿ ತಲಾ 3 ಪಾಯಿಂಟ್ ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಒಟ್ಟು 10 ಮಂದಿ ತಲಾ 3 ಪಾಯಿಂಟ್ ಗಳಿಸಿದ್ದಾರೆ.    

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.