ADVERTISEMENT

ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಕ್ಸೆಲ್ಸನ್

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ: ಜಪಾನ್‌ ಜೋಡಿಗೆ ಮಹಿಳೆಯರ ಡಬಲ್ಸ್‌ ಪ್ರಶಸ್ತಿ

ಏಜೆನ್ಸೀಸ್
Published 15 ಮಾರ್ಚ್ 2020, 21:12 IST
Last Updated 15 ಮಾರ್ಚ್ 2020, 21:12 IST
ಫೈನಲ್ ಪಂದ್ಯದಲ್ಲಿ ಷಟಲ್ ಹಿಂತಿರುಗಿಸಿದ ವಿಕ್ಟರ್ ಅಕ್ಸೆಲ್ಸನ್ –ಎಎಫ್‌ಪಿ ಚಿತ್ರ
ಫೈನಲ್ ಪಂದ್ಯದಲ್ಲಿ ಷಟಲ್ ಹಿಂತಿರುಗಿಸಿದ ವಿಕ್ಟರ್ ಅಕ್ಸೆಲ್ಸನ್ –ಎಎಫ್‌ಪಿ ಚಿತ್ರ   

ಲಂಡನ್: ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಬರ್ಮಿಂಗ್‌ಹ್ಯಾಂನಲ್ಲಿ ಭಾನುವಾರ ಕೊನೆಗೊಂಡ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಅರೆನಾ ಬರ್ಮಿಂಗ್‌ಹ್ಯಾಂ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಚೀನಾ ತೈಪೆಯ ಚೌ ಟೀನ್ ಚೆನ್ ವಿರುದ್ಧ 21–13, 21–14 ಗೇಮ್‌ಗಳಿಂದ ಗೆಲುವು ಸಾಧಿಸಿದರು.

ಈ ಮೊದಲು ಒಟ್ಟು 11 ಬಾರಿ ಇವರಿಬ್ಬರು ಮುಖಾಮುಖಿಯಾಗಿದ್ದರು. ಈ ಪೈಕಿ 10 ಬಾರಿ ಅಕ್ಸೆಲ್ಸನ್ ಗೆಲುವು ಸಾಧಿಸಿದ್ದರು. ಭಾನುವಾರದ ಪಂದ್ಯದಲ್ಲೂ ಅವರು ನಿರಾಯಾಸವಾಗಿ ಗೆದ್ದರು. 46 ನಿಮಿಷಗಳಲ್ಲಿ ಪಂದ್ಯ ಕೊನೆಗೊಂಡಿತು.

ADVERTISEMENT

ಮಹಿಳೆಯರ ಡಬಲ್ಸ್‌ನಲ್ಲಿ ಜಪಾನ್‌ನ ಯೂ ಕಿ ಫುಕುಶಿಮಾ ಮತ್ತು ಸಯಾಕ ಹಿರೋಟ ಜೋಡಿ ಚೀನಾದ ಡು ಯೇ ಮತ್ತು ಲಿ ಯಿನ್ ಹ್ಯೂ ಅವರನ್ನು 21–13, 21–15ರಲ್ಲಿ ಮಣಿಸಿತು. ಮಿಶ್ರ ಡಬಲ್ಸ್ ವಿಭಾಗದ ಪ್ರಶಸ್ತಿ ಇಂಡೊನೇಷ್ಯಾದ ಪ್ರವೀಣ್ ಜೋರ್ಡನ್ ಮತ್ತು ಮೇಲಾತಿ ದೇವ ಒಕ್ಟವ್ಯಂತಿ ಅವರ ಪಾಲಾಯಿತು. ಥಾಯ್ಲೆಂಡ್‌ನ ದೆಚಾಪಾಲ್ ಹಾಗೂ ಸಾಸ್ಪ್ರಿ ತೆರಟಂಚಯ್ ವಿರುದ್ಧ ಇಂಡೊನೇಷ್ಯಾ ಜೋಡಿ 21–15, 17–21, 21–8ರಲ್ಲಿ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.