ADVERTISEMENT

ಬಾಕುವಿನಲ್ಲಿ ನಡೆದ ಪಂಜಕುಸ್ತಿ ಸ್ಪರ್ಧೆಯಲ್ಲಿ ಚಾಮುಂಡಿಬೆಟ್ಟದ ವಿನಯ್ ಸಾಧನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 3:00 IST
Last Updated 22 ಜನವರಿ 2026, 3:00 IST
<div class="paragraphs"><p>ಬಾಕುವಿನಲ್ಲಿ ನಡೆದ ಅಂತರರಾಷ್ಟ್ರೀಯ ಪಂಜಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 4ನೇ ಸ್ಥಾನ ಪಡೆದ ಎಸ್‌.ವಿನಯ್</p></div>

ಬಾಕುವಿನಲ್ಲಿ ನಡೆದ ಅಂತರರಾಷ್ಟ್ರೀಯ ಪಂಜಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 4ನೇ ಸ್ಥಾನ ಪಡೆದ ಎಸ್‌.ವಿನಯ್

   

ಮೈಸೂರು: ಚಾಮುಂಡಿಬೆಟ್ಟದ ಎಸ್‌.ವಿನಯ್‌ ಅವರು ಅಝರ್‌ಬೈಜಾನ್‌ನ ಬಾಕುವಿನಲ್ಲಿ ಮುಕ್ತಾಯಗೊಂಡ ಅಂತರ ರಾಷ್ಟ್ರೀಯ ಪಂಜಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ 4ನೇ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಬೆಂಗಳೂರಿನಲ್ಲಿನ ನಡೆದ 5ನೇ ರಾಷ್ಟ್ರೀಯ ಪಂಜಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದರು. ಭಾರತೀಯ ಪಂಜಕುಸ್ತಿ ಮಂಡಳಿಯು ಬಾಕು ಚಾಂಪಿಯನ್‌ಷಿಪ್‌ಗೆ ಅವರನ್ನು ಆಯ್ಕೆ ಮಾಡಿತ್ತು. ಉತ್ತಮ ಹೋರಾಟ ನಡೆಸಿದ್ದ ಅವರು, ಪದಕದ ಹೊಸ್ತಿಲಲ್ಲಿದ್ದಾಗ 4ನೇ ಸ್ಥಾನ ಪಡೆದಿದ್ದಾರೆ.

ADVERTISEMENT

ಬೆಟ್ಟದ ನಿವಾಸಿ ಆಗಿರುವ ಅವರು ಸುಬ್ರಹ್ಮಣ್ಯ ಮತ್ತು ಪ್ರೇಮಾ ಕುಮಾರಿ ದಂಪತಿ ಪುತ್ರ. ಚಿಕ್ಕಂದಿನಿಂದಲೂ ಪಂಜಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ, 5 ಬೆಳ್ಳಿ, 2 ಬೆಳ್ಳಿ ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.