ADVERTISEMENT

ರೇಸ್‌ ಟು ಕ್ಲೌಡ್ಸ್‌ ರಾಷ್ಟ್ರೀಯ ರ‍್ಯಾಲಿ: ವಿನಯ್‌ಗೆ ಪ್ರಶಸ್ತಿ ‘ಟ್ರಿಪಲ್‌’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 22:59 IST
Last Updated 20 ಅಕ್ಟೋಬರ್ 2025, 22:59 IST
ಕರ್ನಾಟಕದ ವಿನಯ್‌ ಮಾದಯ್ಯ
ಕರ್ನಾಟಕದ ವಿನಯ್‌ ಮಾದಯ್ಯ   

ಬೆಂಗಳೂರು: ಕರ್ನಾಟಕದ ವಿನಯ್‌ ಎಸ್. ಮಾದಯ್ಯ ಅವರು ಆಂಧ್ರಪ್ರದೇಶದ ಕುಪ್ಪಂನಲ್ಲಿ ಭಾನುವಾರ ನಡೆದ ‘ರೇಸ್‌ ಟು ಕ್ಲೌಡ್ಸ್‌’ ರಾಷ್ಟ್ರೀಯ ರ‍್ಯಾಲಿ ಸ್ಪರ್ಧೆಯ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು. 

ಕರ್ನಾಟಕ ಮೋಟರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರ‍್ಯಾಲಿಯಲ್ಲಿ ಟ್ರಾಕ್‌ಮಿಸ್ಟರ್ಸ್‌ ತಂಡವನ್ನು ಪ್ರತಿನಿಧಿಸಿದ್ದ ವಿನಯ್‌ ಅವರು, 1151–1650 ಸಿ.ಸಿ ಪ್ರೊ ಸ್ಟಾಕ್ ವಿಭಾಗದಲ್ಲಿ 2.5 ಕಿ.ಮೀ. ದೂರದ ಗುರಿಯನ್ನು 2 ನಿಮಿಷ, 3.803 ಸೆಕೆಂಡುಗಳಲ್ಲಿ ತಲುಪಿ ಮೊದಲಿಗರಾದರು. ಜೊತೆಗೆ, ಇಂಡಿಯನ್‌ ಓಪನ್‌ ಹಾಗೂ ಐಎನ್‌ಆರ್‌ಸಿ ರ್‍ಯಾಲಿ ವಿಭಾಗದಲ್ಲಿಯೂ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಮಹಿಳೆಯರ ವಿಭಾಗದಲ್ಲಿ ಕೋಹಿಮಾದ ಗೀತಾಲತಾ ರೈ (2ನಿ.42.217ಸೆ.) ಚಾಂಪಿಯನ್‌ ಆದರು.

ADVERTISEMENT

ಈ ರ್‍ಯಾಲಿಯು ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಮಾನ್ಯತೆಯನ್ನು ಪಡೆದುಕೊಂಡಿ‌ದ್ದು, ಒಟ್ಟು 31 ಸ್ಪರ್ಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.