ADVERTISEMENT

ವಾಟರ್ ಪೋಲೊ: ಹಂಗೆರಿಗೆ ದಾಖಲೆ ಜಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 15:13 IST
Last Updated 14 ಜುಲೈ 2019, 15:13 IST
ಹಂಗೆರಿ ತಂಡದ ಆಟಗಾರ್ತಿಯರು ದಕ್ಷಿಣ ಕೊರಿಯಾ ಆಟಗಾರ್ತಿಯಿಂದ (ಮಧ್ಯ) ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಹಂಗೆರಿ ತಂಡದ ಆಟಗಾರ್ತಿಯರು ದಕ್ಷಿಣ ಕೊರಿಯಾ ಆಟಗಾರ್ತಿಯಿಂದ (ಮಧ್ಯ) ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ಗ್ವಾಂಗ್ಜು, ದಕ್ಷಿಣ ಕೊರಿಯಾ (ಎಎಫ್‌ಪಿ): ಆತಿಥೇಯ ತಂಡವನ್ನು 64–0ಯಿಂದ ಮಣಿಸಿದ ಹಂಗೆರಿ ತಂಡದವರು ಮಹಿಳೆಯರ ವಾಟರ್ ಪೋಲೊ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆ ಬರೆದರು. ಇದೇ ಮೊದಲ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಹಂಗೆರಿ ಈ ಗಳಿಗೆಯನ್ನು ಸ್ಮರಣೀಯವಾಗಿಸಿಕೊಂಡಿತು.

‘ಬಿ’ ಗುಂಪಿನ ಪಂದ್ಯದಲ್ಲಿ ಗೋಲುಗಳ ಮಳೆಯನ್ನೇ ಸುರಿಸಿದ ಹಂಗೆರಿ ತಂಡದ ಆಟಗಾರ್ತಿಯರು ಮೊದಲಾರ್ಧದಲ್ಲೇ 34 ಗೋಲುಗಳನ್ನು ಗಳಿಸಿದರು. ದ್ವಿತೀಯಾರ್ಧದಲ್ಲೂ ಆಧಿಪತ್ಯ ಸ್ಥಾಪಿಸಿ 30 ಗೋಲುಗಳನ್ನು ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಯುರೋಪಿಯನ್‌ ಚಾಂಪಿಯನ್‌ಷಿಪ್‌ ನೆದರ್ಲೆಂಡ್ಸ್‌ ಎದುರು 33–0ಯಿಂದ ಸೋತ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಿಂದ ಹೊರಬಿದ್ದಿತು.

ADVERTISEMENT

ರೋಮ್‌ನಲ್ಲಿ 1994ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನ್ಯೂಜಿಲೆಂಡ್ ಪುರುಷರ ತಂಡವನ್ನು 38–1ರಿಂದ ಮಣಿಸಿದ್ದ ಕ್ರೊವೇಷ್ಯಾ ದೊಡ್ಡ ಅಂತರದ ಜಯದ ದಾಖಲೆ ಬರೆದಿತ್ತು. ಈ ದಾಖಲೆ ಈಗ ಹಂಗೆರಿ ಪಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.