ADVERTISEMENT

ಅಮನ್‌ಗೆ ಡಬ್ಲ್ಯುಎಫ್‌ಐ ನೋಟಿಸ್‌

ಪಿಟಿಐ
Published 23 ಸೆಪ್ಟೆಂಬರ್ 2025, 16:10 IST
Last Updated 23 ಸೆಪ್ಟೆಂಬರ್ 2025, 16:10 IST
ಅಮನ್ ಸೆಹ್ರಾವತ್‌
ಅಮನ್ ಸೆಹ್ರಾವತ್‌   

ನವದೆಹಲಿ: ನಿಗದಿಗಿಂತ ಹೆಚ್ಚು ತೂಕದ ಕಾರಣ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಿಂದ ಅಮಾನತುಗೊಂಡಿದ್ದ ಅಮನ್ ಸೆಹ್ರಾವತ್‌ ಅವರಿಗೆ ಭಾರತೀಯ ಕುಸ್ತಿ ಸಂಸ್ಥೆ (ಡಬ್ಲ್ಯುಎಫ್‌ಐ) ಸೋಮವಾರ ಶೋಕಾಸ್‌ ನೋಟಿಸ್‌ ನೀಡಿದೆ.

ಅಮನ್ ಅವರೊಂದಿಗೆ ಕ್ರೊವೇಷ್ಯಾಕ್ಕೆ ತೆರಳಿದ್ದ ಫ್ರೀಸ್ಟೈಲ್‌ ಕೋಚ್‌ಗಳಾದ ಜಗಮಂದರ್‌ ಸಿಂಗ್‌, ವಿನೋದ್‌, ವೀರೇಂದ್ರ ಹಾಗೂ ನರೇಂದ್ರ ಅವರಿಗೂ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ. ನಾಲ್ವರು ಕೋಚ್‌ಗಳಿದ್ದರೂ ತೂಕ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಹೇಗೆ ಎಂದು ಪ್ರಶ್ನಿಸಿದೆ.

ಪುರುಷರ 57 ಕೆ.ಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್‌ ಅವರು ಮೊದಲ ಸುತ್ತಿನ ಪಂದ್ಯಕ್ಕೆ ಮುನ್ನ ನಿಗದಿಗಿಂತಲೂ 1.7 ಕೆ.ಜಿ. ಹೆಚ್ಚಿನ ದೇಹತೂಕ ಹೊಂದಿದ್ದರು. ಹೀಗಾಗಿ ಅವರನ್ನು ಚಾಂಪಿಯನ್‌ಷಿಪ್‌ನಿಂದ ಅನರ್ಹಗೊಳಿಸಲಾಗಿತ್ತು.

ADVERTISEMENT

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮನ್ ಅವರು ಕಂಚಿನ ಪದಕ ಗಳಿಸಿದ್ದರು.

600 ಗ್ರಾಂ ತೂಕ ಹೆಚ್ಚು ಇದ್ದ ಕಾರಣ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅನರ್ಹಗೊಂಡಿದ್ದ ಮಹಿಳಾ ಕುಸ್ತಿಪಟು ನೇಹಾ ಸಂಗ್ವಾನ್‌ ಅವರನ್ನು ಎರಡು ವರ್ಷದ ಅವಧಿಗೆ ಅಮಾನತುಗೊಳಿಸಿ ಡಬ್ಲ್ಯುಎಫ್‌ಐ ಈಚೆಗೆ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.