ADVERTISEMENT

ಹಾಕಿ ಶಿಬಿರ: ಸಲಿಮಾ,ಲಾಲ್ರೆಮ್‌ಸಿಯಾಮಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 20:15 IST
Last Updated 3 ಜನವರಿ 2019, 20:15 IST

ನವದೆಹಲಿ (ಪಿಟಿಐ): ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಭಾರತ ತಂಡದಲ್ಲಿ ಆಡಿದ್ದ ಸಲಿಮಾ ಟೆಟೆ ಮತ್ತು ಲಾಲ್ರೆಮ್‌ಸಿಯಾಮಿ ಅವರು ರಾಷ್ಟ್ರೀಯ ಸೀನಿಯರ್‌ ಮಹಿಳಾ ಹಾಕಿ ಶಿಬಿರಕ್ಕೆ ಪ್ರಕಟಿಸಲಾಗಿರುವ 33 ಸದಸ್ಯರ ಸಂಭಾವ್ಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ರಾಷ್ಟ್ರೀಯ ಶಿಬಿರ, ಶುಕ್ರವಾರದಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಜನವರಿ 24ರಂದು ಭಾರತ ತಂಡ ಸ್ಪೇನ್‌ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕೆ ಪೂರ್ವಭಾವಿ ಸಿದ್ಧತೆ ನಡೆಸಲು ಈ ಶಿಬಿರ ನೆರವಾಗಲಿದೆ.

ಮುಂಚೂಣಿ ವಿಭಾಗದ ಆಟಗಾರ್ತಿ ಲೀಲಾವತಿ ಮಲ್ಲಮಾಡ ಜಯಾ ಅವರೂ ತಂಡದಲ್ಲಿದ್ದಾರೆ.

ADVERTISEMENT

ಸಂಭಾವ್ಯ ತಂಡ: ಗೋಲ್‌ಕೀಪರ್‌ಗಳು: ಸವಿತಾ, ರಜನಿ ಎತಿಮರ್ಪು ಮತ್ತು ಸೋನಲ್‌ ಮಿಂಜ್‌.

ಡಿಫೆಂಡರ್‌ಗಳು: ದೀಪ್‌ ಗ್ರೇಸ್‌ ಎಕ್ಕಾ, ಸುನಿತಾ ಲಾಕ್ರಾ, ಸುಶೀಲಾ ಚಾನು ಫುಖ್ರಾಮ್‌ಬಮ್‌, ಗುರ್ಜಿತ್‌ ಕೌರ್‌, ರಶ್ಮಿತಾ ಮಿಂಜ್‌, ಸುಮನ್‌ ದೇವಿ ತೌದಮ್‌, ಮಹಿಮಾ ಚೌಧರಿ, ನಿಶಾ ಮತ್ತು ಸಲಿಮಾ ಟೆಟೆ.

ಮಿಡ್‌ಫೀಲ್ಡರ್ಸ್‌: ನಿಕಿ ಪ್ರಧಾನ್‌, ಮೋನಿಕಾ, ಲಿಲಿಮಾ ಮಿಂಜ್‌, ನಮಿತಾ ಟೊಪ್ಪೊ, ನೇಹಾ ಗೋಯಲ್‌, ಉದಿತಾ, ಜ್ಯೋತಿ, ಅನುಜಾ ಸಿಂಗ್‌, ಶ್ಯಾಮ ತಿಡಗಮ್‌, ಸೋನಿಕಾ ಮತ್ತು ಕರೀಷ್ಮಾ ಯಾದವ್‌.

ಫಾರ್ವರ್ಡ್‌ಗಳು: ರಾಣಿ, ಲಾಲ್ರೆಮ್‌ಸಿಯಾಮಿ, ನವನೀತ್‌ ಕೌರ್, ನವಜ್ಯೋತ್‌ ಕೌರ್‌, ರಾಜ್ವಿಂದರ್‌ ಕೌರ್‌, ವಂದನಾ ಕಟಾರಿಯಾ, ಅನುಪಾ ಬಾರ್ಲಾ, ಪ್ರಿಯಾಂಕ ವಾಂಖೆಡೆ, ರೀನಾ ಖೋಖರ್‌ ಮತ್ತು ಲೀಲಾವತಿ ಮಲ್ಲಮಾಡ ಜಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.