ADVERTISEMENT

ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌; ನಿಶಾಂತ್‌ಗೆ ಭರ್ಜರಿ ಗೆಲುವು

ಪಿಟಿಐ
Published 3 ಮೇ 2023, 14:52 IST
Last Updated 3 ಮೇ 2023, 14:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಾಷ್ಕೆಂಟ್‌, ಉಜ್ಬೆಕಿಸ್ತಾನ: ಬಲಿಷ್ಠ ಪಂಚ್‌ಗಳಿಂದ ಎದುರಾಳಿಯನ್ನು ಕಂಗೆಡಿಸಿದ ಭಾರತದ ಯುವ ಬಾಕ್ಸರ್ ನಿಶಾಂತ್‌ ಅವರು ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಪ್ರೀಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟರು.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 71 ಕೆಜಿ ವಿಭಾಗದ ಮೊದಲ ಸುತ್ತಿನ ಬೌಟ್‌ನಲ್ಲಿ 22 ವರ್ಷದ ನಿಶಾಂತ್‌ 5–0ಯಿಂದ ಅಜರ್‌ಬೈಜಾನ್‌ನ ಸರ್‌ಖಾನ್ ಅಲಿಯೆವ್ ಅವರನ್ನು ಪರಾಭವಗೊಳಿಸಿದರು.

ಅಮೋಘ ತಾಂತ್ರಿಕ ಕೌಶಲ್ಯ ಹಾಗೂ ಬಿರುಸಿನ ಪಂಚ್‌ಗಳ ಮೂಲಕ ನಿಶಾಂತ್‌ 2021ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಬಾಕ್ಸರ್‌ಗೆ ಸೋಲಿನ ರುಚಿ ತೋರಿಸಿದರು.

ADVERTISEMENT

ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ನಿಶಾಂತ್‌ ಅವರಿಗೆ ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಲೀ ಸಂಗ್ಮಿನ್‌ ಸವಾಲು ಎದುರಾಗಿದೆ.

ಗುರುವಾರ ನಡೆಯಲಿರುವ ಮೊದಲ ಸುತ್ತಿನ ಬೌಟ್‌ಗಳಲ್ಲಿ ಭಾರತದ ಗೋವಿಂದ್ ಸಾಹ್ನಿ (48 ಕೆಜಿ ವಿಭಾಗ), ದೀಪಕ್ ಕುಮಾರ್ (51 ಕೆಜಿ), ಶಿವ ಥಾಪಾ (63.5 ಕೆಜಿ) ಮತ್ತು ನರೇಂದರ್ ಬೆರ್ವಾಲ್ (+92 ಕೆಜಿ) ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.